ಹಲಸಿನ ಹಣ್ಣಿನ ಕಡುಬು / ಇಡ್ಲಿ ! ( ಹವ್ಯಕ ಸ್ಪೆಷಲ್ !) Jackfruit kadubu / idli !( Havyaka special !)

Описание к видео ಹಲಸಿನ ಹಣ್ಣಿನ ಕಡುಬು / ಇಡ್ಲಿ ! ( ಹವ್ಯಕ ಸ್ಪೆಷಲ್ !) Jackfruit kadubu / idli !( Havyaka special !)

ಈ ವೀಡಿಯೋ ಪೂರ್ತಿಯಾಗಿ ನೋಡಿ. ಇಷ್ಟವಾದರೆ, ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ, ಹೊಸ updates ಗಾಗಿಚಾನೆಲ್ ಸಬ್ ಸ್ಕ್ರೈಬ್ ಆಗಿ, ಸಪೋರ್ಟ್ ಮಾಡಿ

   / @nakshatranerale  

ಹಳ್ಳಿಗಳಲ್ಲಿ, ಹಲಸಿನ ಹಣ್ಣಿನ ಕಡುಬಿನ ಹಬ್ಬ ಪ್ರಾರಂಭವಾಗುವುದು ಆರದ್ರಾ ಮಳೆಯ ಸಮಯದಲ್ಲಿ ಮಾಡುವ ಗಡಿ ಹಬ್ಬ/ ಆರದ್ರಾ ಹಬ್ಬದ ಬಳಿಕವೇ! ಕೆಲವು ಹಳ್ಳಿಗಳಲ್ಲಿ ಇಲ್ಲಿಯ ತನಕ (ದೇವರಿಗೆ ಸಮರ್ಪಿಸದ ಹೊರತು) ಹಲಸಿನ ಹಣ್ಣನ್ನು ಬಳಸುವುದಿಲ್ಲ.
ಆದರೆ, ಮಳೆ ಜಾಸ್ತಿಯಾದ ಬಳಿಕ ಹಲಸಿನಹಣ್ಣು ನೀರು ಹೀರಿಕೊಂಡು ಹುಳಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಬಳಕೆ ಸ್ವಲ್ಪ ಕಡಿಮೆಯಾಗುತ್ತದೆ.
ಹಲಸಿನ ವಿಧದಲ್ಲಿ ತಿನ್ನಲು ಯೋಗ್ಯವಾದ ಬಕ್ಕೆ ಹಲಸು, ಕಡುಬಿಗೆ ಯೋಗ್ಯವಾದ ಚಕ್ಕೆ ಹಲಸು ಎಂದು ವಿಭಾಗಿಸಿಕೊಂಡಿದ್ದರೂ ಖಾದ್ಯ ತಯಾರಿಕೆಯಲ್ಲಿ ಯಾವುದೇ ವ್ಯತ್ಯಾಸವಾಗದು. ರುಚಿ ತುಸು ಭಿನ್ನವಾದೀತು. ಮಾಡುವ ವಿಧಾನವೂ ಕೂಡ!
ಹಳ್ಳಿಗಳಲ್ಲಿ ಕಡಬು ಮಾಡಲು ಇಡ್ಲಿ ತಟ್ಟೆಯ ಬದಲು ಬಾಳೆ ಎಲೆಯನ್ನು ಕಟ್ಟಿ, ಕೊಟ್ಟೆ ಮಾಡಿ, ಅದರಲ್ಲಿ ಕಡುಬಿನ ಹಿಟ್ಟು ಹೊಯ್ದು, ಬಾಯಿಕಟ್ಟಿ, ದೊಡ್ಡ ಕಡುಬಿನ ದಳ್ಳೆಯಲ್ಲಿಟ್ಟು ಉಗಿಯಲ್ಲಿ ಬೇಯಿಸುತ್ತಾರೆ.ಅದರ ರುಚಿಯೇ ಅದ್ಭುತ!
ಇಲ್ಲಿ ನಾನು ಹಳ್ಳಿಯ ಹವ್ಯಕರು ಮಾಡುವ ಹಲಸಿನ ಹಣ್ಣಿನ ಕಡುಬಿನ ವಿಧಾನದಲ್ಲಿಯೇ, ಆದರೆ
ಅದನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ತಿಳಿಸಿದ್ದೇನೆ.ಒಮ್ಮೆ ನೀವೂ ಮಾಡಿ ನೋಡಿ. ಹಲಸಿನ ಹಣ್ಣಿನ ಕಡಬು ತಿನ್ನದವರಿಗೂ ಇಷ್ಟವಾಗುತ್ತದೆ.

ಬೇಕಾಗುವ ಪದಾರ್ಥಗಳು: ಕುದಿಸಿರುವ ಹಲಸಿನ ಹಣ್ಣಿನ ರಸ/ಗುಳ, ಜೋನಿ ಬೆಲ್ಲ, ಏಲಕ್ಕಿ, ತೆಂಗಿನಕಾಯಿ ತುರಿ, ಕಲ್ಲುಪ್ಪು, ಕೊಬ್ಬರಿ ಎಣ್ಣೆ, ಅಕ್ಕಿ ಕಡಿ/ ಅಕ್ಕಿ ರವಾ (ಮನೆಯಲ್ಲಿಯೇ ತಯಾರಿಸಿದ ಹುರಿದ ಅಕ್ಕಿಯ ಕಡಿ/ರವಾ ಆದರೆ ಉತ್ತಮ).


Jackfruit Kadabu/idly in the Havyaka style of the village.

In the villages, the festival of jackfruit kadabu starts only after the gadi festival/ Aradra festival which is held during the Aradra rains! In some villages jackfruit is not used until now (unless it is dedicated to God).
However, after heavy rains, jackfruit is more absorb water and turn sour. Therefore, the consumption will decrease slightly.
There is no difference in the preparation of food even though the type of jackfruit is divided into edible jackfruit and candied jackfruit. The taste is slightly different. Even the way to do it!
In villages, instead of an idli plate, a banana leaf is tied and made into a pocket.In it, kadabu flour is sprinkled, sealed, placed in a large kadab pan and cooked in steam.It tastes amazing!
Here I make jackfruit kadabu in the same way as the village Havyaka's do, but
I have told how everyone can do it easily.Try it once.

Ingredients: Boiled jackfruit juice/pulp, joni jaggery, cardamom, grated coconut, brown salt, coconut oil,rice rava (homemade Fried Rice Rava is better).

Note: Prepare the batter and use it for cooking kadabu after at least 5 hours. Otherwise it takes too long to cook.

For the method of doing Havyaka styale kadabu, please watch the full video.If you like this video, please like, share, subscribe to this YouTube channel. Support me this YouTube channel by subscribing. 🙏

   / @nakshatranerale  

Комментарии

Информация по комментариям в разработке