|ಭಜಸದೆ ಕೆಡಬೇಡ ಹುಚ್ಚು ಮನವೆ ನೀ, | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ ||

Описание к видео |ಭಜಸದೆ ಕೆಡಬೇಡ ಹುಚ್ಚು ಮನವೆ ನೀ, | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ ||

|| ಶ್ರೀಗುರುಭ್ಯೋ ನಮಃ ||


ಭಜಿಸದೆ ಕೆಡಬೇಡ ಎ ಹುಚ್ಚು ಮನವೆ ಭಜಿಸು ಸತ್ಯಾತ್ಮ ಗುರುಗಳಾ ||
ಕುಜನ ಮತವಳಿದ ಜಯರಾಯರ ಮೂಲವೃಂದಾವನದಿ ಮಂಗಳ ಮಾಡುತ ಪೂರ್ಣಪ್ರಜ್ಞರ ಮಹಿಮೆಯ ಭಜಿಪರ ||

ಚಿಕ್ಕಂದಿನಿಂದಲೆ ರಕ್ಕಸವೈರಿ ಶ್ರೀಕಾಂತನ ಭಜಿಸಿದಮನದವರು
ಚೊಕ್ಕಾಗಿ ಶಾಸ್ತ್ರದ ಜ್ಞಾನದ ಸಾಗರ ಉಕ್ಕಿ ಹರಿಯಿತು ಗುರುಕುಲದಿ
ಸತ್ಕುಲ ಸಾರಥಿಯಾಗಲು ಮನಮಾಡಿ ಮನಪುಂಡಿ ಕಡೆಗೆ ನಡೆಯುತಲಿ
ದೀಕ್ಷೆಯಿಂದಲಿ ಪ್ರಮೊದರಿಂದ ದೀಕ್ಷೆಯ ಪಡೆದ ಗುರುಗಳ ||

ಸರ್ವಜ್ಞ ಪೀಠದಿ ಪವನನ ಮಹಿಮೆಯ ಸಾರುವ ಬಾಲಯತಿಗಳು
ಸರ್ವ ಸಜ್ಜನಕೆ ಅಭಿನವ ರಘೂತ್ತಮರಂತೆ ಕಂಡ ಪ್ರಚಂಡರು
ರವಿಚಂದ್ರರಂತೀಹ ನ್ಯಾಯಸುಧೆ ಕೊಟ್ಟ ದೇವೇಂದ್ರಸುತರ ಭಜಿಸುತಲೀ
ಭುವಿಯಲ್ಲಿ ಬುಧರ ಕೊಳಕನ್ನು ಕಳೆದು ಬೆಳಕು ನೀಡುವ ಪ್ರಭುಗಳ ||

ಸುಮೇಧರಿವರು ಸುಧೆಯ ಪದಗಳ ಸುಧೆಯನುಣಿಸುವ ಧಣಿಗಳು
ಈ ಮೆದಿನಿಲಿ ಕಾಮನ ಅರಿದ ಹೃಷಿಕೇಶರೆಂದರೆ ತಪ್ಪಾಗದು
ಧಮನಿ ಧಮನಿಯಲ್ಲಿ ವ್ಯಾಸರಾಯ ವಿದ್ಯಾಧೀಶ ರಾಘವೇಂದ್ರ ಮುಂತಾದ
ನಮ್ಮ ಗುರುವೃಂದವ ಹೊಂದಿ ಕೇಶವನ ಭಜಿಸುವ ಪುರುಷೊತ್ತಮರನ್ನ ||

ಶ್ರೀಹರಿಯ ರೂಪದ ನರಹರಿಯ ನಾಮದ ಯಜ್ಞ ಮಾಡಿದ ಪ್ರಲ್ಹಾದರು
ಆಹ್ಲಾದದಿಂದಲಿ ಈ ರೀತಿ ಭಜಿಸಿರೊ ಸಂತುಷ್ಟನಾಗುವ ಪ್ರಭಂಜನ
ಬಹಳ ಕಾಲವು ಬಿಡದೆ ಹಸುಳೆಯು ತಾಯಲ್ಲೆ ಹೊಗಿ ಇರುವಂತೆ
ಇಹಲೊಕದಲ್ಲಿ ಪೂರ್ಣಪ್ರಜ್ಞರ ಶಾಸ್ತ್ರ ಬಿಟ್ಟಿರದ ಮುನಿಗಳ ||

ಆನಂದತೀರ್ಥರ ಪೊಂದಿ ಭಜಿಪರ ಪಾದಕ್ಕೆ ಸಂದಲಿ ನಮನಗಳು
ಕೊನೆ ತನಕ ಮನಕೆ ಶಾಸ್ತ್ರದ ಪಾಕದ ಮಕರಂದ ನೀಡಲಿ ನಮಗೆಂದು
ಜಾಣ ಭಾರತೀರಮಣನ ಅರುಹುವ ಅಭಿನವ ಸತ್ಯಧರ್ಮರಿವರು
ಜ್ಞಾನವಿಠ್ಠಲನಲ್ಲಿ ಮನವಿಟ್ಟು ನಮ್ಮ ಮನದ ಕೊಳೆಯಲ್ಲ ಕಳೆಯುವರ ||

- ಸುಮಂತ ಶ್ರೀ ಮನ್ನಾರಿ.


ರಾಗ ಸಂಯೋಜನೆ
ವಾದಿರಾಜ ಕಾಖಂಡಕಿ

ಗಾಯನ
ವೇಣುಗೋಪಾಲ ಕೆ

ತಬಲಾ
ಶ್ರೀವತ್ಸ ಕೌಲಗಿ

ಕೊಳಲು
ದತ್ತಾತ್ರೇಯ ದೇಸಾಯಿ

ತಾಳ
ಶ್ರೀನಿವಾಸ ಕುಲಕರ್ಣಿ

ಹಿನ್ನೆಲೆ ಸಂಗೀತ
Bharadhwaj

ಸ್ಟುಡಿಯೋ :
ಪ್ರವೀಣ್ ಮಂಕಣಿ, VM ರೆಕಾರ್ಡಿಂಗ

Bhajisade kedabeda hucchu manave


DISCLAIMER:

Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research. Should not be Removed Logo/Signature, Fair use is a use permitted by copyright statute that might otherwise be infringing.

Комментарии

Информация по комментариям в разработке