Banda Sri Hari Tanu || Rachane : Sarvesha Vithala Daasaru..

Описание к видео Banda Sri Hari Tanu || Rachane : Sarvesha Vithala Daasaru..

ರಚನೆ: ಸರ್ವೇಶ ವಿಠ್ಠಲ ದಾಸರು
Rachane : Sarvesha Vithala Dasaru

ನಿರ್ಮಾಣ: ಪರಿಮಳ ಕ್ರಿಯೇಶನ್, ಹುಲಿಗಿ ಸಹೋದರರು, ಹುಬ್ಬಳ್ಳಿ

Production : Parimala creation,Huligi Brothers,Hubli.

ಸಂಗೀತ: ಬಿ ವಿ ಶ್ರೀನಿವಾಸ್
Music : B V Shrinivas

ಸಂಯೋಜನೆ ಮತ್ತು ಗಾಯನ:
ಪಂ ಶ್ರೀ ಅನಂತ ಕುಲಕರ್ಣಿ

Composition And singing : Pt.Anant Kulkarni

ಎಡಿಟಿಂಗ್:ಅನಿರುದ್ಧ ಶ್ರೀವತ್ಸ
Editing : Aniruddha Shrivatsa

ಸಾಹಿತ್ಯ--------- lyrics

||ಎಲ್ಲಲ್ಲಿಯೂ ನಿನ್ನ ವ್ಯಾಪ್ತಿಯಾಗಿರಲು ನಾ ಕಲ್ಲ ಗುಡಿಯಲಿ ಸೊಕ್ಕು ನಿನ್ನ ಹುಡುಕಿದೆನಯ್ಯ! ಪಲ್ಲಾದನ ಸೊಲ್ಲಿಗೆ ಕಂಬದಿಂದಲಿ ಬಂದೆ ಮಲ್ಲ ಮರ್ದನ ನಮ್ಮ ಸರ್ವೇಶ ವಿಠಲ ನೀ ನಿಲ್ಲದ ಸ್ಥಳ ಉಂಟೆ ದೇವಾ ದೇವಾ ದೇವಾ!


ಬಂದಾ ಶ್ರೀ ಹರಿತಾನು ಚಂದದಿ ಬಂದಾ ಶ್ರೀ ಹರಿ ತಾನು || ಪ || ಸಿಂಧುಜ ರಮಣ ಆನಂದ ಮುಕುಂದ | ಅಪ ||

ದುರುಳ ರಕ್ಕಸ ತನ್ನ ಕರುಳ ಕುಡಿಯ ಕರೆದು
ತ್ವರಿತದಿಂದಲಿ ತನ್ನ ತೊಡೆಯಲ್ಲಿ ಕುಳಿಸೆ
ಕರಗಳಿಂದಲಿ ಮುಖ ಶಿರವನ್ನೆ ಸವರುತ್ತ!
ಗುರು ಪೇಳಿದ ಶಾಸ್ತ್ರ ಅರುಹೂ ಎನ್ನುತಲಿ!
ಪೋರ, ಪ್ರಲ್ಲಾದನು ಸಾರುತ್ತಲಿ ಹರಿಯ ನೆನೆಯುತಲಿ ಕ್ರೂರ ನೋಡುತಲಿ ಮೋರೆ ತಿರುಹುತಲಿ! ಭಾರಿ ದೈತ್ಯನು ಪೋರನ ಪಿಡಿದು। ಧಾರುಣಿಗೆ ಶಿರ ಮಾಡುತ ಲಾಗು
ಬಿರುಸಿನಿಂದ ಬೀಸಾಡುವಸಮಯ ದಿ।
ಹರಿಕರುಣದಿ ತಾ ಪೊರೆಯುವೆ ನೆನುತ || ೧ ||

ಕನಕ ಕಶ್ಯಪುವಿನ ಆಜ್ಞೆಯ ಮೇರೆಗೆ | ಘನ ಘನ ದೈತ್ಯರು ಆಗಮಿಸಲ್ಲಿಗೆ ಅನುಮಾನಿಸ ದಿವನ ಕೊಲ್ಲಿರೋ ಎನ್ನಲು! ಕಾನನ ದಾರಿಗೆ ಕರ ಪಿಡಿದೊಯ್ಯಲು! ಧ್ಯಾನ ಮನದಲಿ ಮಾಡುತಲಿ ಮೌನತಾಳುತಲಿ! ದನುಜರು ನೋಡುತಲಿ ಬೆರಗಾಗುತಲಿ। ಹೀನ ದೈತ್ಯರೆಲ್ಲ ಜಾಣ ಬಾಲಕನ ನೇಣುವಿನಿಂಬಿಗೆದೆಳೆ ದಾಡುತಲಿ। ಚಿನ್ನ ಬಾಲಕನ ಕಣ್ಣನು ಕಟ್ಟಿ ಬೆನ್ನು ನೂಕಿಸಲು ಬೆಟ್ಟದ ಕೆಳಗೆ || ೨ ||

ಸರುವ ರಕ್ಕಸ ರೆಲ್ಲ! ಥರಥರನಡುಗುತ್ತ ಮರಣ ಇಲ್ಲಿ ವಗೆನುತ ತಂದರಾ ಸಭೆಗೆ ದುರುಳನು ದುರು ದುರು ನೋಡುತ್ತ ಪೋರನ್ನ ತೋರೊ ನಿನ್ನರಿಯ ನಾ ತರಿದು ಬಿಡುವೆ ನೆನಲು! ಕ್ರೂರ ದೈತ್ಯನೆ ಇದು ತರವಲ್ಲೊ ಹರಿ ಇಹನೆಲ್ಲೋ ಬರೀ ಮಾತಲ್ಲೊ! ಒಮ್ಮೆಸ್ಕರಿಸಲ್ಲೊ! ಕರದಿ ಖಡ್ಡ ಪಿಡಿದೆದುರಿನ ಕಂಬಕೆ! ಭರದಿಂದಲೀ ಬಿಸ್ಟೋಡೆಯುತ ಲಾಗ। ಸಿರಿ ರಮಣ ಸರ್ವೇಶನು ತಾನು!
ನರಮೃಗ ರೂಪದಿ ದುರುಳನ ತರಿಯಲು || ೩ ||

ಗುಡುಗಿನಂದದಿ ಗುಡು ಗುಡಿಸಿ ಕಂಬದಿಂದ ವಡೆದು ರಕ್ಕಸನ ಹೊಡೆದು ನೆಲಕ್ಕೆ ಕೆಡುವಿ ಪಿಡಿದು ದೈತ್ಯನ ತನ್ನ ಅಡಿಯಿಂದ ತುಳಿಯುತ್ತ ಘಡನೆ ಪಿಡಿದು ತನ್ನ ತೊಡೆಯಲ್ಲಿ ಇರಿಸಲು! ಬಿಡದ್ದಾಂಗೆ ಎನ್ನ ಪಿಡಿದೆ! ಮಾಡುವಿಗುಲ್ಲೊ| ಎನ್ನ ಬಿಡಲೊಲ್ಲೊ! ನಾ ಸಾಯುವೆನಲ್ಲೋ ವಡನೆ ನಖಗಳಿಂದ ಕಡು ದೈತ್ಯನ ಪಿಡಿದೊಡಲ ಹರಿದು ಗಡುನಾಲಿಗೆ ಚಾಚುತ ಬಿಡದೆ ಕರಳ ಸರ ಭಡ ಭಡ ಹಾಕುತ ಸಿಡಿಲಿನಂತೆ ಆರ್ಭಟಿಸುತ ಲಾಗ || ೪ ||

ಮೋರೆ ನೋಡುತ ಸರುವ ದೇವತೆಗಳು ಬೆರಗಾಗಿ
ಶರ ವೇಗದಿ ಬಂದರು ಶಿರಿಕಡೆಗೆ ಘೋರ ರೂಪವಮ್ಮ ಭಾರಿ ಗಾತ್ರ ದವನ! ಬಾರೇ ನಮ್ಮಮ್ಮ ನೀ ರಮೀಸು ಎನುತಲಿ ಘೋರ ಪ್ರಲ್ಲಾದನ ಕಳುಹುತಲಿ ಮುಂದೆನಿಲ್ಲುತಲಿ ಕರವ ಮುಗಿಯುತಲಿ! ಮುದ್ದು ಮಾಡುತಲಿ! ಮಾರನ ಮಾತೆಯ ಕೂರಿಸಿ ತೊಡೆಯಲಿ| ಸರುವ ದೇವತೆಗಳೂ ಮಳೆಗರಿಯೆ। ಸರ್ವೋತ್ತಮ ಸರ್ವೇಶ ವಿಠಲನು ಪರಮ ಶಾಂತದಿ ಭಕುತರ ಪೊರೆಯಲು | ೫ ||

Комментарии

Информация по комментариям в разработке