Psalm 91 kannada song || ಕೀರ್ತನೆ 91 ಹಾಡು || ದೇವರ ಆಶ್ರಯದಲ್ಲಿ ನಾನು ಸುರಕ್ಷಿತನು ||

Описание к видео Psalm 91 kannada song || ಕೀರ್ತನೆ 91 ಹಾಡು || ದೇವರ ಆಶ್ರಯದಲ್ಲಿ ನಾನು ಸುರಕ್ಷಿತನು ||

Psalm 91
ದೇವಾಶ್ರಿತರು ಸುರಕ್ಷಿತರು

1 ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು |
ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು ||
2 ನಾನಾತನಿಗೆ, 'ನೀನೇ ನನ್ನ ರಕ್ಷಕನೂ |
ದುರ್ಗವೂ ನಾ ನಂಬಿದ ದೇವನು' ಎನ್ನುವೆನು ||
3 ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ |
ರಕ್ಷಿಸುವನು ಮಾರಕವಾದ ವ್ಯಾಧಿಯಿಂದ||
4 ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ |
ಆಶ್ರಯಪಡೆಯುವೆ ನೀ ಆತನ ರಕ್ಕೆಗಳಡಿಯಲಿ ।
ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ ||
5 ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ |
ಹಗಲಿನಲಿ ಹಾರಿಬರುವ ಬಿರುಸು ಬಾಣಕ ||
6 ಕತ್ತಲೆಯಲಿ ಸಂಚರಿಸುವ ವಿಪತ್ತಿಗೆ |
ನಡುಹಗಲಲೆ ಪೀಡಿಸುವ ಜಾಡ್ಯಕೆ ||
7 ಬೀಳಬಹುದು ಸಾವಿರ ಹೆಣಗಳು ಪಕ್ಕದಲಿ |
ಹತ್ತು ಸಾವಿರ ಹೆಣಗಳು ನಿನ್ನ ಬಲಗಡೆಯಲೆ |
ಅಂಥ ಕೇಡೊಂದೂ ಬಾರದು ನಿನ್ನ ಪಾಲಿಗೆ ||
8 ನೀನಿದನು ಕಣ್ಣಾರೆ ಕಾಣುವೆ | ದುರುಳರ ದಂಡನೆಯನ್ನು ನೋಡುವೆ||
ದುರುಳರ ದಂಡನೆಯನ್ನು ನೋಡುವೆ||
9 ಪ್ರಭುವನೆ ನಿನ್ನಾಶ್ರಯವಾಗಿಸಿ ಕೊಂಡಿರುವುದರಿಂದ |
ಪರಾತ್ಪರನನೆ ನಿನ್ನ ನಿವಾಸ ಆಗಿಸಿಕೊಂಡದ್ದರಿಂದ ||
10 ಹಾನಿಯೊಂದೂ ನಿನಗೆ ಸಂಭವಿಸದು |
ಕೆಡಕು ನಿನ್ನ ಗುಡಾರದ ಬಳಿ ಸುಳಿಯದು ||
11 ನೀನು ಹೋದೆಡೆಯೆಲ್ಲಾ ನಿನ್ನ ಕಾಯುವುದಕ್ಕೆ|
ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ ||
12 ನಿನ್ನ ಕಾಲು ಕಲ್ಲಿಗೆ ತಾಗದಂತೆ |
ನಿನ್ನನೆತ್ತಿಕೊಳ್ಳರವರು ಕೈಗಳಲೆ ||
13 ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ |
ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವ ||
14 ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿ ಸುವನು ಅವನನು |
ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು ||
15 ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು |
ಸಂಕಟದೊಳು ಅವನ ಸಂಗಡವಿರುವನು |
16 ಅವನನು ಉದ್ಧರಿಸಿ ಘನಪಡಿಸುವನು ||
ದೀರ್ಘಾಯುಸ್ಸನ್ನಿತ್ತು ತೃಪ್ತಿ ಪಡಿಸುವೆನು |
ನಾನು ನೀಡುವ ಮುಕ್ತಿಯನವನಿಗೆ ಮನಗಾಣಿಸುವೆನು'" ||

Комментарии

Информация по комментариям в разработке