ಏನೆಂದು ಸ್ತುತಿಸಲಿ | ಹಯವದನ | Enendu Stutisali | Hayavadana | Devaranama with Lyrics | ದಾಸರ ಪದ | ಭಜನೆ

Описание к видео ಏನೆಂದು ಸ್ತುತಿಸಲಿ | ಹಯವದನ | Enendu Stutisali | Hayavadana | Devaranama with Lyrics | ದಾಸರ ಪದ | ಭಜನೆ

https://dasarahadugalu.blogspot.com/2...

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಏನೆಂದು ಸ್ತುತಿಸಲಿ ದೇವರಂಗಯ್ಯ ನಿನ್ನ
ಜಾಣತನವ ನೀನೆ ಬಲ್ಲೆ ಶ್ರೀರಂಗಯ್ಯ ||ಪ||

ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ
ನೀನು ಕುತ್ಸಿತ ತಮನ ಕೊಂದೆ ರಂಗಯ್ಯ||
ಸ್ವಚ್ಛ ಕೂರುಮನಾದೆ ರಂಗಯ್ಯ
ಭಕ್ತರಿಚ್ಛೆಯ ಪಾಲಿಸಿದೆ ಶ್ರೀರಂಗಯ್ಯ ||೧||

ಆದಿವರಾಹ ನೀನಾದೆ ರಂಗಯ್ಯ
ನೀನು ಪೋದ ಮೇದಿನಿಯ ತಂದೆ ರಂಗಯ್ಯ||
ಬೇಧಿಸಿ ಕಂಭದಿ ಬಂದೆ ರಂಗಯ್ಯ
ಪ್ರಹ್ಲಾದನ ಕಾಯ್ದೆ ಶ್ರೀರಂಗಯ್ಯ ||೨||

ಬಲಿಯನು ವಂಚಿಸಿದಂಥ ರಂಗಯ್ಯ
ನೀನು ನೆಲವ ಓರಡಿ ಮಾಡ್ದೆ ರಂಗಯ್ಯ||
ಬಲವಂತ ಭಾರ್ಗವನಾದೆ ರಂಗಯ್ಯ
ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ ||೩||

ಜಲಧಿಯನು ಕಟ್ಟಿದೆ ರಂಗಯ್ಯ
ಹತ್ತು ತಲೆಯವನ ಕುಟ್ಟಿದೆ ರಂಗಯ್ಯ
ಮಲೆತ ಮಾವನ ಕೊಂದೆ ರಂಗಯ್ಯ
ಯದುಕುಲವನುದ್ಧರಿಸಿದೆ ಶ್ರೀರಂಗಯ್ಯ ||೪||

ಸತಿಯರ ಮೋಹಿಸಿದೆ ನೀನು ರಂಗಯ್ಯ
ಬಲು ಚತುರ ಬೌದ್ಧನಾದೆ ರಂಗಯ್ಯ||
ಖತಿಯಿಂದ ಹಯವೇರಿದೆ ರಂಗಯ್ಯ
ದುರ್ಮತಿಯ ಕಲಿಯ ಕೊಂದೆ ಶ್ರೀರಂಗಯ್ಯ ||೫||

ತ್ರಿಭುವನದೊಳಗಧಿಕ ರಂಗಯ್ಯ
ನೀನು ಉಭಯ ಕಾವೇರಿವಾಸ ರಂಗಯ್ಯ
ವಿಭೀಷಣನಿಗೆ ಪ್ರಸನ್ನ ರಂಗಯ್ಯ
ನೀನು ಅಭಯವಿತ್ತೆನ್ನ ಕಾಯೋ ಶ್ರೀರಂಗಯ್ಯ ||೬||

ವಾದಿರಾಜನಿಗೊಲಿದೆ ರಂಗಯ್ಯ
ನೀನು ಮೋದಿ ಹಯವದನನಾದೆ ರಂಗಯ್ಯ
ಸಾಧಿಸಿ ಖಳರ ಕೊಂದೆ ರಂಗಯ್ಯ
ವಿನೋದದಿ ವೇದವ ತಂದೆ ಶ್ರೀರಂಗಯ್ಯ ||೭||

EneMdu stutisali dEvaraMgayya ninna
jANatanava nIne balle SrIraMgayya ||pa||

matsyanAgi Srutiya taMde raMgayya
nInu kutsita tamana koMde raMgayya||
svacCa kUrumanAde raMgayya
BaktaricCheya pAliside SrIraMgayya ||1||

AdivarAha nInAde raMgayya
nInu pOda mEdiniya taMde raMgayya||
bEdhisi kaMBadi baMde raMgayya
prahlAdana kAyde SrIraMgayya ||2||

baliyanu vaMcisidaMtha raMgayya
nInu nelava OraDi mADde raMgayya||
balavaMta BArgavanAde raMgayya
nInu Caladi kShatriyara gedde raMgayya ||3||

jaladhiyanu kaTTide raMgayya
hattu taleyavana kuTTide raMgayya
maleta mAvana koMde raMgayya
yadukulavanuddhariside SrIraMgayya ||4||

satiyara mOhiside nInu raMgayya
balu chatura bauddhanAde raMgayya||
KatiyiMda hayavEride raMgayya
durmatiya kaliya koMde SrIraMgayya ||5||

triBuvanadoLagadhika raMgayya
nInu uBaya kAvErivAsa raMgayya
viBIShaNanige prasanna raMgayya
nInu aBayavittenna kAyO SrIraMgayya ||6||

vAdirAjanigolide raMgayya
nInu mOdi hayavadananAde raMgayya
sAdhisi KaLara koMde raMgayya
vinOdadi vEdava taMde SrIraMgayya ||7||

Комментарии

Информация по комментариям в разработке