ಏಳು ಹನುಮಂತ | ಶ್ರೀ ಪುರಂದರ ವಿಠಲ | Elu Hanumantha | Sri Purandara Dasaru | Kannada Devaranama | Bhajane

Описание к видео ಏಳು ಹನುಮಂತ | ಶ್ರೀ ಪುರಂದರ ವಿಠಲ | Elu Hanumantha | Sri Purandara Dasaru | Kannada Devaranama | Bhajane

https://dasarahadugalu.blogspot.com/2...

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಏಳು ಹನುಮಂತ ಎಷ್ಟು ನಿದ್ದೆ ||ಪ||

ಮಾತನಾಡಲು ಬೇಕು ಮುದ್ರಿಕೆ ತರಬೇಕು |
ಹರಿ ಕುಶಲ ಜಾನಕಿಗೆ ತಿಳಿಸಬೇಕು ||
ವನವ ಕೀಳಲು ಬೇಕು ಚೂಡಾಮಣಿ ತರಬೇಕು |
ಹರಿ ಹರುಷದಿಂದಲಿ ಖ್ಯಾತಿ ಪಡೆಯಲು ಬೇಕು ||೧||

ಶರಧಿ ಲಂಘಿಸಬೇಕು ರಘುಪತಿಯ ಕೂಡಿರಬೇಕು |
ದುರುಳ ಇಂದ್ರಾಜಿತ್ತನ ಗೆಲ್ಲಬೇಕು ||
ಅನುಜ ಲಕ್ಷ್ಮಣಗೆ ಸಂಜೀವನ ತಂದು ಕೊಡಲುಬೇಕು |
ಹನುಮಂತ ಬಲವಂತ ಎಂದೆನಿಸಬೇಕು ||೨||

ದುಷ್ಟರಕ್ಕಸರನ್ನೆಲ್ಲ ಕುಟ್ಟಿ ಕೆಡಹಲು ಬೇಕು |
ಹತ್ತು ತಲೆ ರಾವಣನ ಬಲ ಇಳಿಸಬೇಕು ||
ಭಕ್ತ ವಿಭೀಷಣಗೆ ಪಟ್ಟಗಟ್ಟಲು ಬೇಕು |
ಲಕ್ಷ್ಮೀ ಸಹಿತಾ ಅಯೋಧ್ಯಗೆ ತೆರಳಬೇಕು ||೩||

ಕುರುಕುಲದಲಿ ಕುಂತಿ ಸುತನಾಗಿ ಜನಿಸಬೇಕು |
ರಣದಲ್ಲಿ ಕೌರವರ ಗೆಲ್ಲಬೇಕು ||
ವನದೊಳಗೆ ಘನ ತೃಷೆಯ ಘಾತಿ ಪಡಿಸಲು ಬೇಕು |
ಮಡದಿಗೆ ಸೌಗಂಧವ ತರಲುಬೇಕು ||೪||

ಯತಿಯಾಗಿ ಬರಬೇಕು ಕುಮತ ಖಂಡಿಸಬೇಕು |
ಅನೃತ ವಾದಿಗಳ ಗೆಲಿಯಬೇಕು ||
ಮಧ್ವ ಶಾಸ್ತ್ರವ ಲೋಕಕ್ಕೆಲ್ಲಾ ಬೋಧಿಸಲು ಬೇಕು
ಮುದ್ದು ಪುರಂದರ ವಿಠಲ ಎಂದೆನಿಸಬೇಕು ||೫||

ELu hanumaMta eShTu nidde ||pa||

mAtanADalu bEku mudrike tarabEku |
hari kuSala jAnakige tiLisabEku ||
vanava kILalu bEku cUDAmaNi tarabEku |
hari haruShadiMdali KyAti paDeyalu bEku ||1||

Saradhi laMGisabEku raGupatiya kUDirabEku |
duruLa iMdrAjittana gellabEku ||
anuja lakShmaNage saMjIvana taMdu koDalubEku |
hanumaMta balavaMta eMdenisabEku ||2||

duShTarakkasarannella kuTTi keDahalu bEku |
hattu tale rAvaNana bala iLisabEku ||
Bakta viBIShaNage paTTagaTTalu bEku |
lakShmI sahitA ayOdhyage teraLabEku ||3||

kurukuladali kuMti sutanAgi janisabEku |
raNadalli kauravara gellabEku ||
vanadoLage Gana tRuSheya GAti paDisalu bEku |
maDadige saugaMdhava taralubEku ||4||

yatiyAgi barabEku kumata KaMDisabEku |
anRuta vAdigaLa geliyabEku ||
madhva SAstrava lOkakkellA bOdhisalu bEku
muddu puraMdara viThala eMdenisabEku ||5||

Комментарии

Информация по комментариям в разработке