ಸಕಲ ಕಷ್ಟ ನಿವಾರಣೆಗಾಗಿ ಲಕ್ಷ್ಮೀ ಹೃದಯ ಮತ್ತು ನಾರಾಯಣ ಹೃದಯ ರಂಗೋಲಿ ಮತ್ತು ಸ್ತೋತ್ರ/Narsyan hruday/laxmihruday🙏

Описание к видео ಸಕಲ ಕಷ್ಟ ನಿವಾರಣೆಗಾಗಿ ಲಕ್ಷ್ಮೀ ಹೃದಯ ಮತ್ತು ನಾರಾಯಣ ಹೃದಯ ರಂಗೋಲಿ ಮತ್ತು ಸ್ತೋತ್ರ/Narsyan hruday/laxmihruday🙏

#ನಾರಾಯಣ ವರ್ಮ

ಮೊದಲು ನಾರಾಯಣ ವರ್ಮ ಹೇಳಿ ನಂತರ ಲಕ್ಷ್ಮೀ ಹೃದಯ ಹೇಳಬೇಕು ನಂತರ ಮತ್ತೆ ನಾರಾಯಣ ವರ್ಮ ಹೇಳಬೇಕು...ಒಟ್ಟು ಎರಡು ಸಲ ನಾರಾಯಣ ವರ್ಮ

ನಾರಾಯಣ ವರ್ಮ

ಸಕಲ ಋಷಿಗಳಲ್ಲಿ ಹರಿ ನಮ್ಮ ಸ್ವಾಮಿಯಾಗಿ ರಕ್ಷಿಸಿ! ಜಲದಲಿ ಮಚ್ಚಾವತಾರನಾಗಿ। ಸ್ಥಳದಲ್ಲಿ ವಾಮನನಾಗಿ ರಕ್ಷಿಸು ನಿಮ್ಮ ನೆನೆವರಾ ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸು ನಿಮ್ಮ ನೆನೆವರಾ | ಪರ್ವತಾಗ್ರಹದಲ್ಲಿ ಪರಶುರಾಮನಾಗಿ ರಕ್ಷಿಸು ಪರದೇಶದಲ್ಲಿ ರಾಮಚಂದ್ರನಾಗಿ ರಕ್ಷಿಸು ನಿಮ್ಮ ನೆನೆವರಾ| ಆಶ್ರಯದಲ್ಲಿ ನರನಾರಾಯಣನಾಗಿ ರಕ್ಷಿಸು! ಅಯೋಗ್ಯರಲ್ಲಿ ದತ್ತಾತ್ರೇಯನಾಗಿ ರಕ್ಷಿಸು| ಕರ್ಮ ಬಂಧಗಳೆಲ್ಲ ಕಳೆದು ರಕ್ಷಿಸು ಕಪಿಲ ಮೂರ್ತಿಯಾಗಿ ಪ್ರಾತಃಕಾಲದಲ್ಲಿ ಕೇಶವ ನಮ್ಮ ರಕ್ಷಿಸು। ಸಾಯಂಕಾಲದಲಿ ಗೋವಿಂದ ನಮ್ಮ ರಕ್ಷಿಸು ಆಪರಾಹ್ನ ಕಾಲಗಳೆಲ್ಲ ಕಳೆದು ರಕ್ಷಿಸು | ನಮ್ಮ ಸಕಲ ಕಾಲಗಳಲ್ಲಿ ನರಕದಿಂದ ಕೂರ್ಮನಾಗಿ ರಕ್ಷಿಸು। ವಿಪತ್ತಿನಿಂದ ಧನ್ವಂತರಿ ರಕ್ಷಿಸು | ಅನ್ನ ದೇವತೆ ಭಜನೆ ಕಳೆದು ರಕ್ಷಿಸಯ್ಯ ಶ್ರೀಕೃಷ್ಣಾ ಮೂರುತಿಯಾಗಿ ಅಜ್ಞಾನ ವಿಷಯಗಳ ಕಳೆದು ರಕ್ಷಿಸು ವೇದವ್ಯಾಸ ಮೂರ್ತಿಯಾಗಿ | ಕೃಷ್ಣನ ಶಂಖವೆ ನಿಮ್ಮ ಧನಿದುರಿ ರಾಕ್ಷಸರ ಎದೆ ಒಡೆಸಿ, ಭಯಬಡಿಸಿ ಲಯವನೆ ಮಾಡಿಸಿ ಪೂತ ಗ೦ಧರ್ವರು ಕೂಷ್ಮಾಂಡ ತೋರಿಸಲು ವಿಷ್ಣು ಗದೆ ರಾಕ್ಷಸರ ಒಡೆದು ಚೂರ್ಣವ ಮಾಡಿ) ಕಿಡಿಗಳಂತೆ ಭೂಮಿ ಮೇಲೆ ಆಧರಿಸಿ ಶತಚಂದ್ರ ಪ್ರಭೆಯಂತೆ ಹೊಳೆವ ಹರಿಯು ನಮ್ಮ ಮತಿವಂತರು ವೈರಿಗಳ ಕಣ್ಣಿಗೆ ಕಾಣಬಾರದು ಮಾಡಿ ತೋರಿಸಿ ತಮ್ಮ ದಿವ್ಯತೇಜಗಳ ಧರ್ಮ ವಿಷಯದಲಿ ಹಯಗ್ರೀವನಾಗಿ ರಕ್ಷಿಸು ಮಧ್ಯಾಹ್ನ ಕಾಲದಲಿ ಮಧುಸೂದನನಾಗಿ, ಸಾಯಂಕಾಲದಲ್ಲಿ ಶ್ರೀವತ್ಸ ಮೂರ್ತಿಯಾಗಿ ಉಷಃಕಾಲದಲಿ ಜನಾರ್ದನನಾಗಿ ರಕ್ಷಿಸು ಆರ್ಧರಾತ್ರಿಯಲಿ ಹೃಷಿಕೇಶನಾಗಿ ಅಪರಾತ್ರಿಯಲ್ಲಿ ರಕ್ಷಿಸಯ್ಯ ಶ್ರೀವತ್ಸ ಮೂರ್ತಿಯಾಗಿ ಸಾಮವೇದಕ್ಕೆ ಅಭಿಮಾನಿಯಾದ ಗರುಡವಾಹನನೆ ಸಲುಹೆನ್ನ ವಿಷದ ಭಯಗಳ ಬಿಡಿಸಿ। ಕೃಷ್ಣ ಮುಕುಟ ಧರನೆ ರಕ್ಷಿಸೊ ನಮ್ಮನ್ನ ಪ್ರಾಣೇಂದ್ರಿಯದಿಂದ ಬುದ್ದಿಯಿಂದ ದಿಕ್ಕು ರಕ್ಷಿಸೂ ನಮ್ಮನ್ನ ಪ್ರಾಣೇಂದ್ರಿಯದಿಂದ ಬುದ್ದಿಯಿಂದ ದಿಕ್ಕು ದಿಕ್ಕುಗಳಲ್ಲಿ ನಾರಸಿಂಹಮೂರ್ತಿಯಾಗಿ ನಾರಸಿಂಹನಾದಗಳಿಂದ ಎಲ್ಲ ಪರಿಯಿಂದ ಭಕ್ತರನೆಲ್ಲ ನರಹರಿ ಇದ್ದು ರಕ್ಷಿಸೋ ಗುರುಮಧ್ವರಾಯರ ಗುರು ವಿಶ್ವವ್ಯಾಪಕರ ಸುವಿಷ್ಟು ವೈಷ್ಣವರ ಮಗನಂತೆ ನಿಮ್ಮ ಸುನಾಮ ಎಂದು
ವಿಶ್ವವ್ಯಾಪಕರ ಸುವಿಷ್ಟು ವೈಷ್ಣವರ ಮಗನಂತೆ ನಿಮ್ಮ ಸುನಾಮ ಎಂದು ಪಾಡಿಸುಖಿಯಾಗಿ ಜಮದಗ್ನಿ ವತ್ಸ ಪ್ರಹ್ಲಾದ ವರದ, ಅಸುರರ ಗೆಲಿದ ಬಲರಾಮ ಜಾನಕಿವಲ್ಲಭ ಜಯ ಜಯರಾಮ ನಿತ್ಯವೈಕುಂಠ ನಿಜ ಗೋವಿಂದ, ಅಂಬರೀಷಾಯುಗ ವರಗಳ ಕೊಟ್ಟ ನಂಬಿದ ಭಕ್ತರಿಗೆ ಅಭಯ ಕೊಟ್ಟ ಯಶೋದೆಯ ಮನ ಉದ್ದರಿಸಿದ ಹಯವದನ ರಕ್ಷಿಸು ॥ಷಷ್ಠಸ್ಕಂದ ಅಷ್ಟಮೋದ್ಯಾಯ ಇಂದ್ರನಿಗೆ ಉಪದೇಶಿಸಿದ ನಾರಾಯಣವರ್ಮ ಸಂಪೂರ್ಣಂ ||

ಶ್ರೀ ಲಕ್ಷ್ಮೀ ಹೃದಯ

ಶ್ರೀದೇವಿ ತಾನೂ ಶ್ರೀರಾಮನ್ನ ಮನೆಯಲ್ಲಿ ಆದಿ ಅಂತ್ಯಗಳಲ್ಲದಿರಲು,

ಚೌದ್ಯ ಸುಖ ರೂಪದಿ೦ದ ಅವಳಿಗೆ ವೇದವಾಲಿಗಳ ಓದುತ್ತಿರಲು

ಅವಳಿಂದೆ ಹರಿಯು ಮೂರು ಮನೆಗಳಿಪ್ಪಾಲಯಕೆತನ ಭಯವಿಲ್ಲ

ಮೊದಲೆ ಉದಕವಿಲ್ಲ ಆದಕಾರಣದಿಂದ ಮುದಿ ತಾನಾದಳು ಅಚ್ಯುತಗೆ

ಅ೦ಬುಧಿಯಾದಳು, ಆಗ ಮಹಾ ಲಕುಮಿ ಅಂಬರದ ಆಭರಣವಾದಳು,

ಪೊಂಬಣ್ಣದ ಆಲದೆಲೆಯಾದಳು ಏನೆಂಬೆ ಇವಳ ಸಾಹಸಕ, ಶ್ರೀ

ಭೂ-ದುರ್ಗೆಯರ ಆಲಿಸಿದನು ಹರಿಯು ತಾ ಆಲದೆಲೆಯ ಮೇಲೆ

ಮಲಗಿದನು. ಅಚ್ಯುತನ ಹೃದಯದಲೆ ಲಿಂಗವಿಶಿಷ್ಟರಾದ ಇನಿತು

ಜೀವರ ಹಿಡಿ ತು೦ಬಾಕೊಂಡು ತನಯನ ನೂರು ವರ್ಷ ಪರಿಯಂತದಿ

ವನಜಾಕ್ಷ ವಟಪತ್ರ ಶಯನನಾಗಿ ಜನರೆಲ್ಲ ತಮ್ಮ ಗತಿಗೆ ತಕ್ಕ ಸಾಧನವ

ಸಾಧಿಸಿಕೊಳ್ಳಲೆಂದು ಕರುಣೆ ಪುನರಪಿ ಸೃಷ್ಟಿಯ ಮಾಡುವೆನೆಂದು

ಲಾಲನೆಗೆ ಪ್ರಕೃತಿಯ ಮಮತೆ ಇತ್ತು ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ

ಜೀವರನ್ನು ಸೃಜಿಸಿದ ಹಯವದನನು ||

Комментарии

Информация по комментариям в разработке