Lali Govinda Lali (Sri Sripadarajaru) | ಲಾಲಿ ಗೋವಿಂದ ಲಾಲಿ (ಶ್ರೀ ಶ್ರೀಪಾದರಾಜರು)

Описание к видео Lali Govinda Lali (Sri Sripadarajaru) | ಲಾಲಿ ಗೋವಿಂದ ಲಾಲಿ (ಶ್ರೀ ಶ್ರೀಪಾದರಾಜರು)

ಶ್ರೀ #ಶ್ರೀಪಾದರಾಜರು (#Sripadarajaru) ಹರಿದಾಸ ಪಂಥದ ಪ್ರಮುಖರು ಹಾಗು ದ್ವೈತ ತತ್ವದ ಪ್ರತಿಪಾದಕರು. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾಸರಾದ #ಪುರಂದರದಾಸ ರ ಮತ್ತು #ಕನಕದಾಸ ರ ಗುರುಗಳು.

ಸಾಮಾನ್ಯ ಜನರಿಗೆ ತಿಳಿಯುವಂತೆ ಸರಳ ಕನ್ನಡದಲ್ಲೇ ರಾಮಾಯಣ, ಮಹಾಭಾರತ, ಭಾಗವತದ ಕಥೆಗಳು ಮೊದಲಾದವನ್ನು #ಕನ್ನಡ ಹಾಡುಗಳನ್ನಾಗಿ ಪರಿವರ್ತಿಸಿ ಪೂಜಾ ಸಮಯದಲ್ಲಿ ಭಾಗವತರ ಮುಖೇನ ಹಾಡಿಸುವ ಪದ್ಧತಿಯನ್ನು ಜಾರಿಗೆ ತಂದರು.

“#ರಂಗವಿಠಲ” ಅಂಕಿತದೊಂದಿಗೆ ಅನೇಕ ಕೀರ್ತನೆಗಳನ್ನು ರಚಿಸಿದ ಇವರ ಜನಪ್ರಿಯವಾದ ಕೃತಿ “ಶ್ರೀ #ಮಧ್ವನಾಮ”ದಲ್ಲಿ ಶ್ರೀ ವಾಯುದೇವರ ಮೂರು ಅವತಾರಗಳನ್ನು ವರ್ಣಿಸಿ, "ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ" ಕೃತಿಯಲ್ಲಿ ಜೀವನ ಅಸ್ವಾತಂತ್ರ್ಯವನ್ನು, ಪರಮಾತ್ಮನ ಸ್ವಾತಂತ್ರ್ಯವನ್ನು ಬಹಳ ಸುಂದರವಾಗಿ, ಅನುಭವದ ನುಡಿಗಳಿಂದ ಪ್ರತಿಪಾದಿಸಿದ್ದಾರೆ.

ಕ್ರಿ.ಶ.೧೫೦೪ರಲ್ಲಿ ವೃಂದಾವನಸ್ಥರಾದ ಶ್ರೀಪಾದರಾಜರ ಬೃಂದಾವನವು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿದೆ.

"#ಲಾಲಿ #ಗೋವಿಂದ ಲಾಲಿ" ಕೃತಿಯಲ್ಲಿ ರಾಜರು ಶ್ರೀಹರಿಯ ದಶಾವತಾರಗಳನ್ನು ಉಲ್ಲೇಖಿಸಿ, ಬಣ್ಣಿಸಿ ಅವರಿಗೆ ಲಾಲಿಯನ್ನು ಹಾಡಿದ್ದಾರೆ.

ರಾಗ: #ಆನಂದಭೈರವಿ
Raga: #Anandabhairavi

Комментарии

Информация по комментариям в разработке