ಏಳಮ್ಮ ತುಳಸಿ ಕೋಮಲವಾಣಿ | ಶ್ರೀ ಪುರಂದರ ದಾಸರು | Elamma Tulasi Komalavani | Sri Purandara Dasaru | Bhajane

Описание к видео ಏಳಮ್ಮ ತುಳಸಿ ಕೋಮಲವಾಣಿ | ಶ್ರೀ ಪುರಂದರ ದಾಸರು | Elamma Tulasi Komalavani | Sri Purandara Dasaru | Bhajane

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ಏಳಮ್ಮ ತುಳಸಿ ಕೋಮಲವಾಣಿ
ನೀಲವರ್ಣನ ರಾಣಿ ನಿತ್ಯ ಕಲ್ಯಾಣಿ ||ಪ||

ಉಟ್ಟ ಪೀತಾಂಬರ ಹೃದಯದಿ ಕೌಸ್ತುಭ
ಇಟ್ಟ ದ್ವಾದಶನಾಮ ನೊಸಲಲ್ಲಿ ತಿಲಕ
ತೊಟ್ಟ ಮುತ್ತಿನ ಅಂಗಿ ತೋಳು ಬಾಪುರಿಯಿಂದು
ಲಕ್ಷುಮಿರಮಣ ನಿನ್ನಪ್ಪಿದನಲ್ಲೆ ತುಳಸಿ ||೧||

ಬಲದ ಕೈಯಲ್ಲಿ ಚಕ್ರ ಎಡದ ಕೈಯಲ್ಲಿ ಶಂಖ
ಕೊರಳೊಳಗೆ ಹಾಕಿದ್ದ ಶ್ರೀವತ್ಸ ಲಾಂಛನ
ಉರಗಶಯನನ ಮೇಲೆ ಮಲಗಿದ್ದ ಪರಮಾತ್ಮ
ಕೊರಳೊಳು ಧರಿಸಿಕೊಂಡಿಹನಲ್ಲೆ ತುಳಸಿ ||೨||

ಬೃಂದಾವನದಲ್ಲಿ ಛಂದುಳ್ಳ ಬನದಲ್ಲಿ
ಮಂದಗಮನೆಯರಮ್ಯಾಳದಲ್ಲಿ ನಂದಗೋಪನ
ಕಂದ ಬಾಯ ತಾಂಬೂಲದಲ್ಲಿ ಆ-
ನಂದದಿಂದಲಿ ನಿನ್ನಪ್ಪಿದನಲ್ಲೆ ತುಳಸಿ ||೩||

ಎಳೆಯ ಬೆಳದಿಂಗಳಿಂದ ಕೊಳಲ ನಾದಗಳಿಂದ ಎಡ
ಬಲದಲೊಪ್ಪುವ ಛತ್ರ ಚಾಮರಗಳಿಂದ
ಕಡಗ ಕಂಕಣದಿಂದ ಮುಡಿದ ಮಲ್ಲಿಗೆಯಿಂದ
ಮುರಹರಮೂರ್ತಿ ನಿನ್ನಪ್ಪಿದನಲ್ಲೆ ತುಳಸಿ ||೪||

ಕಾಲಲಂದುಗೆಯಿಂದ ಕಸ್ತೂರಿ ನಾಮಗಳಿಂದ
ಬಾಲಗೋಪಾಲರಿಂದ ಭಕ್ತವತ್ಸಲನು
ವೇಣುನಾದವು ಮಾಡಿ ಪ್ರಾಣಪತಿಯು ಲಕ್ಷ್ಮೀ
ಪುರಂದರ ವಿಠಲ ನಿನ್ನಪ್ಪಿದನಲ್ಲೇ ತುಳಸಿ ||೫||

ELamma tuLasi kOmalavaaNi
nIlavarNana raaNi nitya kalyaaNi ||pa||

uTTa pItaaMbara hRudayadi koustubha
iTTa dvaadashanaama nosalalli tilaka
toTTa muttina aMgi tOLu baapuriyiMdu
lakShumiramaNa ninnappidanalle tuLasi ||1||

balada kaiyalli cakra eDada kaiyalli shaMKa
koraLoLage haakidda shrIvatsa laaMCana
uragashayanana mEle malagidda paramaatma
koraLoLu dharisikoMDihanalle tuLasi ||2||

bRuMdaavanadalli CaMduLLa banadalli
maMdagamaneyaramyaaLadalli naMdagOpana
kaMda baaya taaMbUladalli A-
naMdadiMdali ninnappidanalle tuLasi ||3||

eLeya beLadiMgaLiMda koLala naadagaLiMda eDa
baladaloppuva Catra caamaragaLiMda
kaDaga kaMkaNadiMda muDida malligeyiMda
muraharamUrti ninnappidanalle tuLasi ||4||

kaalalaMdugeyiMda kastUri naamagaLiMda
baalagOpaalariMda bhaktavatsalanu
vENunaadavu maaDi praaNapatiyu lakShmI
puraMdara viThala ninnappidanallE tuLasi ||5||

Комментарии

Информация по комментариям в разработке