ಇನ್ನು ನೋಡರಿ ಜಗದ ಹೈರಾಣ

Описание к видео ಇನ್ನು ನೋಡರಿ ಜಗದ ಹೈರಾಣ

ಗಾಯನ ಶ್ರೀ ಶರಣಕುಮಾರ ಯಾಳಗಿ
ತಬಲಾ ಶ್ರೀ ಯಮನೇಶ ಯಾಳಗಿ
ರಚನೆ: ರಾಚಣ್ಣ ಪತ್ತಾರ ಬಳಬಟ್ಟಿ



ಇನ್ನು ನೋಡರಿ ಜಗದ ಹೈರಾಣ ಸುಳ್ಳಲ್ಲೊ ಜಾಣ
ಮಳ್ಳ ಜನರಿಗೆ ತಿಳಿಯದಿಲ್ಲಣ್ಣ
ಜೊಳ್ಳು ಜೊಟ್ಟು ಹಾರತೈತಿ
ಒಳ್ಳೆ ಬೀಜ ಉಳಿಯತೈತಿ
ಮಳ್ಳ ಹೀಡಿದ ಕುರಿಹಾಂಗ ಕಳ್ಳೆ ಮಳ್ಳೆ ಆಡತೈತಿ
¶ಪ¶
ಹುಲ್ಲು ಕಲ್ಲಿಗೆ ಜಗಳ ನಡಿತಣ್ಣಾ
ಹುಲ್ಲೆದ್ದು ಹೊಡೆದರೆ ಕಲ್ಲು ಪುಡಿಪುಡಿ ಆಗತಾದಣ್ಣಾ
ಅಲ್ಲಾ ಹೌದು ಎಂಬ ಮಾತು ಬಲ್ಲಜ್ಞಾನಿ ಅವಗೆಗೊತ್ತು
ಅಲ್ಲಮಪ್ರಭು ಬರುವಕಾಲಕೆ ಕಲ್ಲವಲ್ಲೆ ಜಗವುದಣ್ಣಾ
¶೧¶
ಜೋಡು ಸೂರ್ಯರು ಮೂಡತಾರಣ್ಣಾ
ಮೂಡುವ ಕಾಲಕ್ಕೆ ಕೇಡು ಆಗುವ ಸೂಚ ನೋಡಣ್ಣಾ
ಕಾಡಮನೆಯ ಕರೆಯ ಬರುವುದು
ಕಾಳಕತ್ತಲೆ ಮುಸುಕಿ ಕೊಂಬುದು
ರೋಡ್ ತುಂಬಾ ಉರಿಯ ಹತ್ತಿ
ಓಡಾಡಲಿಕ್ಕೆ ಜಾಗವಿಲ್ಲ ಅಣ್ಣಾ
¶೨¶
ಕಾಲಜ್ಞಾನದ ನುಡಿಯ ಕೇಳುತ್ತಾ
ಈಗಾಗುವಂಥಾ ಕಂಡಜ್ಞಾನವು ನೋಡಿ ತಿಳಿಯಣ್ಣ
ಮಂಡಲೊಡೆಯ ಬರುವ ಕಾಲಕ್ಕೆ
ಬೆಂಡು ಮುಳುಗುವುದು ಗುಂಡು ತೆಲ್ವದು
ಪುಂಡ ಗುರು ಬಲ ಭೀಮನೊಂದನು
ಕಂಡು ಕರಪಿಡಿದೇಳಿರಣ್ಣಾ
@@@@@@@

Комментарии

Информация по комментариям в разработке