ಗಂಡ ಹೆಂಡಿರು ಚಂದ ಗಂಧ ಕುಂಕುಮ ಚಂದ

Описание к видео ಗಂಡ ಹೆಂಡಿರು ಚಂದ ಗಂಧ ಕುಂಕುಮ ಚಂದ

ಗಾಯನ ಶ್ರೀ ಶರಣಕುಮಾರ ಯಾಳಗಿ
ತಬಲಾ ಶ್ರೀ ಯಮನೇಶ ಯಾಳಗಿ
ಸಹಕಾರ ಶಶಿಧರ ಎಸ್ ಯಾಳಗಿ


#ಗಂಡ ಹೆಂಡಿರು #ಚಂದ #ಗಂಧ ಕುಂಕುಮ ಚಂದ #ಜಾನಪದ ಗೀತೆ #ಸತಿ #ಪತಿ #ಹೇಗಿರಬೇಕು ಅನ್ನುವ #ನೀತಿ #ಜಾನಪದ #trending#foryou#youtube#pace #uttarakhand #kannada #song

innu hechhina videos galigagi

   / @gurukottagana  


¶ಜಾನಪದ ಗೀತೆ¶

ಗಂಡ ಹೆಂಡಿರು ಚಂದ ಗಂಧ ಕುಂಕುಮ ಚಂದ
ಬಂಗಾರದಾಗ ಬಳೆ ಚಂದ ಕೊರಳಾಗ
ಕರಿಮಣಿ ಸರ ಬಲು ಚಂದ
¶ಪ¶
ಹೆಂಡವು ಹಿತವಲ್ಲ ಹಿತ್ತಾಳೆ ಬಾಂಡೆವಲ್ಲ
ಉತ್ರಾಣಿ ಕಡ್ಡಿ ನೆರಳಲ್ಲ ಹೆಣ್ಣಿಗೆ
ಹುಟ್ಟಿದ ಮನೆಯು ಸ್ಥಿರವಲ್ಲ
¶೧¶
ತಂಗಳು ರೊಟ್ಟಿಯಲ್ಲ ತಂಗಿ ಬೀಗುತಿ ಅಲ್ಲ
ತಾಯಿಗೆ ಬೈದವಳು ಮಗಳು ಅಲ್ಲ
ರಾಜ್ಯದಿ ಗಂಡಗ ಬೈದವಳ ಗರತಿ ಅಲ್ಲ
¶೨¶
ಕರಿಸೀರಿ ಉಡಬೆಡ ಕಡಿವಾಣ ಬಿಡಬೆಡ
ನಡು ಓಣಿಯಲಿ ನಿಂತು ನಗಬೆಡ
ನನ ಮಗಳೆ ತವರಿಗೆ ಮಾತು ತರಬೆಡ
¶೩¶
ಅತ್ತೆ ಬೈದರಪ್ಪು ಮಾವ ಬೈದರಪ್ಪು
ಹಣಚಿಯ ಬಟ್ಟು ನಿನಗೊಪ್ಪು
ನನ ಬಾಲೆ ಚೊಚ್ಚಿಲ ಬಸಿರು ನಿನಗೊಪ್ಪು
¶೪¶
ಹೊತ್ತು ಮುಳಗಿದರೇನು ಕತ್ತಲಾದರೇನು
ಅಪ್ಪಾ ನಿನ ಗುಡಿಗೆ ಬರುವೇನು
ಬಸವೇಶ ಮುತ್ತಿನ ಕದವ ತೆಗದಿರು
¶೫¶
ಆಕಳದ ತುಪ್ಪವ ಜ್ಯೋತಿಗೆ ತುಂಬಿಟ್ಟು
ಏಕ ಭಾವದಲಿ ನಡಕೊಂಡು ಸಾಕಯ್ಯ
ಬಂಜೆತನವಂತು ನಾನೊಲ್ಲೆ
¶೬¶
ಬಾಣಂತಿಯ ಮನೆಮುಂದ ಬಾಳಿಯ ಚಪ್ಪರ
ಬಾಗಿ ಬಾರಣ್ಣ ಬಳೆಗಾರ ನನ ಸೊಸೆಗೆ
ಬಾಣಂತಿಯ ಬಳೆಯ ಇಡಬಾರ
@@@@@@@@

Комментарии

Информация по комментариям в разработке