ಶ್ರೀ ಗುರುರಾಘವೇಂದ್ರ ಸ್ತುತಿ | ಶ್ರೀ ಗುರು ಸುಯತೀಂದ್ರರ ರಚನೆ | 16. ಮನಮಂದಿರದೊಳು ನೆಲಸೈ ಬಂದು ||

Описание к видео ಶ್ರೀ ಗುರುರಾಘವೇಂದ್ರ ಸ್ತುತಿ | ಶ್ರೀ ಗುರು ಸುಯತೀಂದ್ರರ ರಚನೆ | 16. ಮನಮಂದಿರದೊಳು ನೆಲಸೈ ಬಂದು ||

16. ಮನ ಮಂದಿರದೊಳು ನೆಲಸೈ ಬಂದು ||ಪ||
ರಾಘವೇಂದ್ರ ಗುರು ದಯಮಾಡಿಂದು ||ಅ.ಪ||
ನಗೆ ನೋವಿನ ಆಗರವೀ ಮನವು |
ಭವ ಬಂಧನದೀ ಕಾಣದು ತಿಳಿವು |
ಗುರುಪದ ಸೇವೆಯಿಂ ಮೂಡಲಿ ಅರಿವು |
ನಿಮ್ಮಯ ಕೃಪೆ ಎಮಗಿಹ ಪರವು ||೧||
ವರ ಮಂತ್ರಾಲಯ ಪಾವನ ನಿಲಯ |
ಕರುಣ ಹೃದಯದಿ ನೀಡುವೆ ಅಭಯ |
ಮನದೊಳು ಮುಸುಕಿದ ಈ ಕತ್ತಲೆಯ |
ನೀಗಿಸಿ ಬೆಳಕನು ನೀ ನೀಡು ಜೀಯಾ ||೨||
ಬೃಂದಾವನವೇ ತವಸ್ಥಿರ ವಾಸವು |
ವೇಣುಹಾರಿಯ ಧ್ಯಾನವೇ ನಿರತವು |
ಧೀನರ ಪಾಲಿಪ ಧೀಮಂತ ಭಾವವು |
ಗುರು ಸುಯತೀಂದ್ರರ ಕೃಪೆ ಪಾವನವು ||೩||
*****

Комментарии

Информация по комментариям в разработке