Ep. 17 ಉಡುಪಿ- ಸೋಮ - ಪವಮಾನ ಅರ್ಥ ಚಿಂತನೆ | Chandra is Soma too! | Mahabharat Darshana

Описание к видео Ep. 17 ಉಡುಪಿ- ಸೋಮ - ಪವಮಾನ ಅರ್ಥ ಚಿಂತನೆ | Chandra is Soma too! | Mahabharat Darshana

ಚಂದ್ರ ತಪ ಮಾಡಿದ್ದು ಎರಡು ಕಡೆಯೆಂದು ಹೇಳುತ್ತಾರೆ . ಒಂದು ಪ್ರಭಾಸ ತೀರ್ಥದ ಪಕ್ಕದ ಸೋಮನಾಥ . ಇನ್ನೊಂದು ಶಿವಬೆಳ್ಳಿಯ ಚಂದ್ರಮೌಳೀಶ್ವರನ ಸನಿಹ . ಎರಡೂ ನಿಜ . ತಪಕ್ಕೆ ಕುಳಿತದ್ದು ಇಲ್ಲಿ ; ನಮ್ಮಲ್ಲಿ ; ಶಿವಬೆಳ್ಳಿಯಲ್ಲಿ . ಫಲಿತಾಂಶಕ್ಕೆ ಹೋಗಿದ್ದು ಅಲ್ಲಿಗೆ ; ಪ್ರಭಾಸಕ್ಕೆ ! ಅಲ್ಲಿ ಆತನ ರೋಗ ನಿವಾರಣೆಯಾದ್ದರಿಂದ , ಆ ಸೋಮನಾಥನಿಗೆ ಗುಡಿ ಕಟ್ಟಿಸಿದ . ಇಲ್ಲಿ ತಪಸ್ಸಿಗೆ ಜಾಗ ಸಿಕ್ಕಿತಾಗಿ , ಈ ಜಾಗಕ್ಕೆ ಶಿವ ಕಾರುಣ್ಯ ಒದಗಿತು . ಈಶ್ವರ ಈ ಕ್ಷೇತ್ರಕ್ಕೆ ಎಂದರೆ ಶಿವಬೆಳ್ಳಿಗೆ ಪುನರ್ನಾಮಕರಣ ಮಾಡಿದ .

ಉಡು ಎಂದರೆ ನಕ್ಷತ್ರ . ಇಪ್ಪತ್ತೇಳು ನಕ್ಷತ್ರಗಳಿಗೆ ಗಂಡನಾದ್ದರಿಂದ / ಪತಿಯಾದ್ದರಿಂದ , ಚಂದ್ರ ಉಡುಪತಿಯಾದ . ಅದೇ ಮುಂದೆ ಉಡುಪನೆಂದಾಯಿತು . ಈ ಉಡುಪ ಕುಳಿತ ಸ್ಥಳ
" ಉಡುಪಿ " ಯಾಯಿತು . ಇಂದದು ಕೃಷ್ಣ ಕಾರಣದಿಂದ ಪ್ರಸಿದ್ಧ . ಅದೂ ಒಂದು ವಿಸ್ಮಯ ! ಹೆಸರು ಉಡುಪಿ . ಶಿವನಿಟ್ಟ ಹೆಸರು ! ಅದಿಂದು ಪ್ರಸಿದ್ದವಾಗಿರುವುದು ಕೃಷ್ಣನಿಂದ ; ವಿಷ್ಣುವಿನ ಎಂಟನೆಯ ಅವತಾರದಿಂದ !!

ಪೌರಾಣಿಕವಾದ ಈ ಕಥೆಯಲ್ಲದೇ , ಚಂದ್ರನ ಖಾತೆಗೆ ಜಮೆಯಾಗಿರುವ ವೇದ ಭಾಗವೂ ಉಂಟು . ಅದೇ ಒಂಬತ್ತನೆಯ ಮಂಡಲ ; ಋಗ್ವೇದದ ಒಂಬತ್ತನೆಯ ಮಂಡಲ ! ಋಗ್ವೇದವನ್ನು ಹತ್ತು ಮಂಡಲಗಳಾಗಿ ವಿಭಜಿಸಿರುವುದನ್ನು ಈಗಾಗಲೇ ಹೇಳಿರುವೆ . ಅವುಗಳಲ್ಲಿ ಒಂಬತ್ತನೆಯ ಮಂಡಲ ಪೂರಾ ಚಂದ್ರನಿಗೆ ಸಂಬಂಧಿಸಿದ್ದು ! ಅದೇ ಅದರ ವಿಶೇಷ . ೧,೨,೩,೪,೫,೬,೭,೮ ಮತ್ತು ೧೦ , ಈ ಎಲ್ಲ ಮಂಡಲಗಳಲ್ಲಿಯೂ ಅನೇಕ ದಾರ್ಶನಿಕರು ಅನೇಕ ದೇವತೆಗಳನ್ನು ದರ್ಶಿಸಿ , ಅನೇಕಾನೇಕ ಸೂಕ್ತಗಳನ್ನು ರಚಿಸಿದರು . ಆದರೆ ಒಂಬತ್ತನೆಯ ಮಂಡಲದ ವಿಶೇಷವೆಂದರೆ ದರ್ಶಿಸಿದ್ದೇನೋ ಅನೇಕರೇ . ಆದರೆ ಅವರೆಲ್ಲರೂ ದರ್ಶಿಸಿದ್ದು ಒಂದೇ ದೇವತೆಯನ್ನು !!ಅದೇ ಚಂದ್ರ ! ಈ ಮಂಡಲದಲ್ಲಿರುವ ಸೂಕ್ತಗಳೆಲ್ಲ ಚಂದ್ರ ಪ್ರಶಂಸೆಗೇ ಮೀಸಲು !! ೧೧೦೮ ಋಚೆಗಳ ಗುರಿಯೂ ಒಂದೇ . ಅದೇ ಚಂದ್ರ ದರ್ಶನ ! ಸೊಮ ಸಂದರ್ಶನ !!

ಇದೊಂದೇ ಈ ಸಂಚಿಕೆಯ ವಿಶೇಷವಲ್ಲ !! ಎಂದರೆ ?
೧. ಪವಮಾನಃ ಸೋಮಃ ಎಂದರೇನು ?
೨. ಆಶಿರ ಎಂದರೇನು ?
೩. ಸೋಮಲತೆಗೂ ಸೋಮನಿಗೂ ಏನು ಸಂಬಂಧ ?
೪. ಅಸಲು ಈ ಸೋಮಲತೆ ಎಲ್ಲಿಂದ ಬಂದಿತು ? ..........ಈ ಎಲ್ಲ ಕುತೂಹಲ ಸಂಗತಿಗಳನ್ನೂ ಅಭ್ಯಾಸ ಮಾಡಿ ೧೭ನೆಯ ಸಂಚಿಕೆಯಲ್ಲಿ .

--------------|||||---------------

Chandra gave up his sixteen kalas to Shiva as a sign of gratitude but Shiva returned all but one. This he kept on his head so came to be known as Chandramoulishwara and the place where Chandra did the penance is known today as Udupi which was previously Shivabelli. Udupa means the King of nakshatras that is Chandra.
Chandra during the night is supposed to be filling up all the plants with their characteristic juices. He is called Soma which also means Shankara. Somanath temple is Shiva temple but also known for Chandra. The word Soma has become a synonym for Chandra.

After this story from puranas, Guruji describes the importance of Chandra in Vedas, how one mandala has Chandra alone as a deity. Lots of descriptions of Chandra's achievements as Soma, giving energy via Somarasa to King Indra and power to Vajrayudha even!
Somarasa the juice of the fantastic creeper Somalata! It is like Amruta. It seems it used to be available in the mountains of Punjab.
This Somalata was in heaven, but how was it brought here on earth? The story will unfold in the next episode.

Комментарии

Информация по комментариям в разработке