16 ವಿಜಯರಾಯರ ಪಾದ | ಮೋಹನ ವಿಠಲ | Vijaya Rayara Paada | Mohana Vithala | Vijayadasara Hadu

Описание к видео 16 ವಿಜಯರಾಯರ ಪಾದ | ಮೋಹನ ವಿಠಲ | Vijaya Rayara Paada | Mohana Vithala | Vijayadasara Hadu

https://dasarahadugalu.blogspot.com/2...

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

ಸಾಹಿತ್ಯ : ಶ್ರೀ ಮೋಹನ ದಾಸರು
Kruti: Sri Mohana Dasaru

Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್

ವಿಜಯ ರಾಯರ ಪಾದ ನಿಜವಾಗಿ ನಂಬಲು
ಅಜನಪಿತ ತಾನೆ ಒಲಿವಾ ||ಪ||

ದ್ವಿಜಕೇತನನ ಗುಣದ ವ್ರಜವ ಕೊಂಡಾಡುವ
ಸುಜನ ಮಂದಾರನೀತ ಪ್ರಖ್ಯಾತ ||ಅ.ಪ.||

ವಿ ಎಂದು ನುಡಿಯಲು, ವಿಷ್ಣು ದಾಸನಾಗುವನು,
ಜ ಎಂದು ನುಡಿಯಲು ಜನನ ಹಾನಿ
ಯ ಎಂದು ಕೊಂಡಾಡೆ ಯಮಭಟರು ಓಡುವರು
ರಾಯ ಎಂದೆನಲು ಹರಿಕಾವ ವರವೀವ ||೧||

ಇವರ ಸ್ಮರಣೆಯು ಸ್ನಾನ,
ಇವರ ಸ್ಮರಣೆಯು ಧ್ಯಾನ,
ಇವರ ಸ್ಮರಣೆಯು ಅಮೃತಪಾನ
ಇವರ ಸ್ಮರಣೆ ಮಾಡೆ ಯುವತಿಗಕ್ಷಯವಿತ್ತ,
ತ್ರಿವಿಕ್ರಮನೆ ಮುಂದೆ ನಿಲುವ ನಲಿವ ||೨||

ವಾರಣಾಸಿ ಯಾತ್ರೆ ಮೂರು ಬಾರಿ ಮಾಡಿ,
ಮಾರಪಿತನೊಲುಮೆಯನು ಪಡೆದು ||
ಮೂರಾವತಾರದ ಮಧ್ವಮುನಿರಾಯರ,
ಚಾರು ಚರಣವನು ಭಜಿಪ ಈ ಮುನಿಪ ||೩||

ಪುರಂದರ ದಾಸರ ಪರಮಾನುಗ್ರಹ ಪಾತ್ರ
ಗುರುವಿಜಯ ರಾಯನೀತಾ ||
ಸಿರಿ ವಿಜಯ ವಿಠಲನ ಶ್ರೀನಿವಾಸಾಚಾರ್ಯರು
ಹರಿಯಾಜ್ಞೆಯಿಂದ ಕೊಟ್ಟರು ದಿಟರು ||೪||

ದಾನಧರ್ಮದಿ ಮಹಾ ಔದಾರ್ಯ ಗುಣಶೀಲ
ಶ್ರೀನಿವಾಸನ ಪ್ರೇಮ ಕುವರ ||
ಮಾನವಿ ಸೀಮೆಯ ಚೀಕಲಪರವಿಯ ವಾಸ,
ಮೋಹನ ವಿಠಲನ ನಿಜದಾಸ ಉಲ್ಲಾಸ ||೫||

vijaya rAyara pAda nijavAgi naMbalu
ajanapita tAne olivA ||pa||

dvijakEtanana guNada vrajava koMDADuva
sujana maMdAranIta praKyAta ||a.pa.||

vi eMdu nuDiyalu, viShNu dAsanAguvanu,
ja eMdu nuDiyalu janana hAni
ya eMdu koMDADe yamaBaTaru ODuvaru
rAya eMdenalu harikAva varavIva ||1||

ivara smaraNeyu snAna,
ivara smaraNeyu dhyAna,
ivara smaraNeyu amRutapAna
ivara smaraNe mADe yuvatigakShayavitta,
trivikramane muMde niluva naliva ||2||

vAraNAsi yAtre mUru bAri mADi,
mArapitanolumeyanu paDedu ||
mUrAvatArada madhvamunirAyara,
cAru caraNavanu Bajipa I munipa ||3||

puraMdara dAsara paramAnugraha pAtra
guruvijaya rAyanItA ||
siri vijaya viThalana SrInivAsAcAryaru
hariyAj~jeyiMda koTTaru diTaru ||4||

dAnadharmadi mahA audArya guNaSIla
SrInivAsana prEma kuvara ||
mAnavi sImeya cIkalaparaviya vAsa,
mOhana viThalana nijadAsa ullAsa ||5||

Комментарии

Информация по комментариям в разработке