Song on Colours - Abhilasha S - ಬಣ್ಣಗಳ ಹಾಡು - ಕನ್ನಡದಲ್ಲಿ ಬಣ್ಣಗಳ ಹೆಸರು - Manasi Sudhir

Описание к видео Song on Colours - Abhilasha S - ಬಣ್ಣಗಳ ಹಾಡು - ಕನ್ನಡದಲ್ಲಿ ಬಣ್ಣಗಳ ಹೆಸರು - Manasi Sudhir

Lyricist : Abhilasha S
Music Composition : Gururaj Marpalli
Key board : Surabhi Sudhir
Videograghy : Sudhir Rao
Editing : Manasi Sudhir (First time tried something new - chroma)
Eng subtitles : Alaka Jithendra

The beginning clip of sunrise is taken from Akshay Shah's YouTube channel with permission. Thank you very much AkshayShah ji.
   / deodhan  
   • Beautiful Sunrise Animation (Time Lap...  
You can visit to this for more beautiful videos.. My sincere thanks to all the wonderful photographers of the photos that I just used from Google Images.


Copyright of audio and my performance video is reserved..
DOWNLOADING AND UPLOADING THIS CONTENT IS STRICTLY PROHIBITED. PLEASE RESPECT THE EFFORT BY SHARING THE ORIGINAL LINK. Thank you very much.
ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ಯೂಟ್ಯೂಬ್ ಅಥವಾ ಬೇರೆ ಯಾವುದೇ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಮ್ಮ ಶ್ರಮಕ್ಕೆ ಗೌರವ ನೀಡಿ ಒರಿಜಿನಲ್ ಲಿಂಕನ್ನು ಶೇರ್ ಮಾಡಿ

Follow me on instagram
  / manasi_sudhir  

Follow me on facebook
  / bhaavageethabhinaya  

Follow me on YouTube
   / manasisudhir  

ಮೂಡಣದಲ್ಲಿ ಮೂಡಿದ ನೇಸರ
ಬಣ್ಣದ ಆಟವ ಆಡುವನು
ಬೆಳ್ಂಬೆಳಗೇ ಆಗಸದಲ್ಲಿ
ಓಕುಳಿ ನೀರನು ಚೆಲ್ಲುವನು

ಕಿರಣದ ಕುಂಚವ ಅದ್ದುತಲದರಲಿ
ತರತರ ರಂಗನು ಕಲೆಸುವನು
ಭೂಮಿಗೆ ಬಣ್ಣವ ಬಳಿಯುವನು
ಲೋಕವ ಬಣ್ಣದಿ ಬೆಳಗುವನು


ಗರಿಗಳ ಬಿಚ್ಚಿ ನಲಿಯುವ ನವಿಲು
ಮಗುಚುವ ಅಲೆಗಳ‌ ಭಾರೀ ಕಡಲು
ಹಗಲಲಿ‌ ಕಾಣುವ ಗಗನದ ಬಯಲು
ಚೆಲುವನು ಚೆಲ್ಲೋ ನೀಲದ ಸೊಗಸು

ಮರ ಗಿಡ ಬಳ್ಳಿಯ ಬಗೆ ಬಗೆ ಎಲೆಗಳು
ಮಾಮರದಲ್ಲಿಹ ಮುದ್ದಿನ ಗಿಳಿಗಳು
ತೊಂಡೆ ಬೆಂಡೆ ಅಲಸಂಡೆ
ಹಸಿರನು ಹೊದ್ದವು ನಾ ಕಂಡೆ

ಅಮ್ಮನು ಕೊಟ್ಟ ನೊರೆ ನೊರೆ ಹಾಲು
ಅಜ್ಜನ ತಲೆಯ ಮಿರಿ ಮಿರಿ ಕೂದಲು
ಬಾನಲಿ ಹರವಿದ ಹತ್ತಿಯ ಮುಗಿಲು
ಬಿಳಿ ಬಿಳಿ ಬಣ್ಣ ಹೌದಲ್ಲಣ್ಣಾ

ಕುಣಿಕುಣಿದಾಡುವ ಕಣ್ಣಿನ ಗೊಂಬೆಯು
ಕಾ ಕಾ ಗೆಳೆಯ ಸುಂದರ ಕಾಗೆಯು
ಜೇನು ಕಳ್ಳ ಕಾಡಿನ ಕರಡಿ
ಕರ್ರನೆ ಕಪ್ಪು ಕಾಡಿಗೆ ಕಪ್ಪು

ಕೊಳದೊಳಗರಳಿದ ಚೆಂದದ ತಾವರೆ
ಗಿಡದಲಿ ಜೋಲುವ ಹಣ್ ಹಣ್ ಮೆಣಸು
ರುಚಿ ರುಚಿ ಸೇಬು ರಸ ರಸ ಟೊಮ್ಯಾಟೊ
ಕೆಂಪೋ ಕೆಂಪು ಕಡುಗೆಂಪು

ಹೊಲದಲಿ ತೂಗುವ ಜೋಳದ ತೆನೆಯು
ಕೊನೆಯಲಿ ಕಳಿತ ಬಾಳೆಯ ಹಣ್ಣು
ಸೂರ್ಯನ ಗೆಳತಿ ಸೂರ್ಯಕಾಂತಿ
ಅರಶಿನ ಹಳದಿ ‌ನೀನೇನಂತಿ ‌‌‌‌


ಬೆಟ್ಟದ ಸಾಲಿನ ನಡುವಿನ ಬಾನಲಿ
ಕಾಮನ ಬಿಲ್ಲನು ಚಿತ್ರಿಸಿ ರವಿಯು
ಪಡುವಣದಲ್ಲಿ ಇಳಿಯುವನು
ಬಣ್ಣದ ಸಂತೆಯ ಮುಗಿಸುವನು

Комментарии

Информация по комментариям в разработке