ಅದೊಂದು ಮಾತಿನಿಂದಾಗಿ Srinivasa Murthyಗೆ ‘ಸಾರಿ ಅಂಕಲ್’ ಎಂದಿದ್ದ Puneeth Rajkumar | Vijay Karnataka

Описание к видео ಅದೊಂದು ಮಾತಿನಿಂದಾಗಿ Srinivasa Murthyಗೆ ‘ಸಾರಿ ಅಂಕಲ್’ ಎಂದಿದ್ದ Puneeth Rajkumar | Vijay Karnataka

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಅನೇಕ ಸಿನಿಮಾಗಳಲ್ಲಿ ಶ್ರೀನಿವಾಸ್ ಮೂರ್ತಿ ತೆರೆ ಹಂಚಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್ ಜೊತೆಗಿನ ನೆನಪುಗಳನ್ನು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹಂಚಿಕೊಂಡಿದ್ದಾರೆ.

‘’ಚಿಕ್ಕವಯಸ್ಸಿನಲ್ಲಿ ಅಪ್ಪು ಆಟಾಡಿಕೊಂಡು ಇರುತ್ತಿದ್ದ. ಸೆಟ್‌ಗೆ ಕರೆಯೋವವರೆಗೂ ಆಚೆ ಆಟಾಡಿಕೊಂಡು ಇರುತ್ತಿದ್ದ. ಸೆಟ್‌ಗೆ ಬಂದ್ಮೇಲೆ ಡಿಸಿಪ್ಲಿನ್ಡ್ ಆಗಿ ಇರುತ್ತಿದ್ದ. ಡಾ.ರಾಜ್‌ಕುಮಾರ್ ತಂಗಿ ನಾಗಮ್ಮ ಅವರು ‘ಅಪ್ಪು’ ಅಂತ ಕರೆಯುತ್ತಿದ್ದರು. ಹೀಗಾಗಿ ಎಲ್ಲರೂ ಅಪ್ಪು ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದರು. ನಾಮಕರಣದ ದಿನ ಲೋಹಿತ್ ಅಂತ ಹೆಸರಿಟ್ಟಿದ್ದರು. ಬಳಿಕ ಜೋತಿಷ್ಯದ ಪ್ರಕಾರ ಪುನೀತ್ ಅಂತ ಬದಲಾಯಿಸಿದರು’’

‘’ಪೌರಾಣಿಕ ಡೈಲಾಗ್ಸ್ ಹೇಳುವುದು ತುಂಬಾ ಕಷ್ಟ. ಅಂಥದ್ರಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಅಪ್ಪು ಲೀಲಾಜಾಲವಾಗಿ ಅಭಿನಯಿಸಿದ್ದಾರೆ’’

‘’ಕವಿರತ್ನ ಕಾಳಿದಾಸ ಸಿನಿಮಾ ಆದ್ಮೇಲೆ 20 ವರ್ಷಗಳ ನಂತರ ಅಪ್ಪು ಸಿನಿಮಾದ ಮೂಲಕ ಮತ್ತೆ ನನಗೆ ಡಾ.ರಾಜ್‌ಕುಮಾರ್ ಬ್ಯಾನರ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ತು. ‘ಅಪ್ಪು’ ಸಿನಿಮಾದ ಫಸ್ಟ್ ಕಾಪಿ ನೋಡಿ ಪಾರ್ವತಮ್ಮ ರಾಜ್‌ಕುಮಾರ್ ನನಗೆ ಫೋನ್ ಮಾಡಿ ಅಭಿನಂದಿಸಿದ್ದರು’’ ಎಂದು ವಿಜಯ ಕರ್ನಾಟಕ ಆನ್ ಲೈನ್ ಗೆ ನೀಡಿದ ಸಂದರ್ಶನದಲ್ಲಿ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

Senior actor Srinivasa Murthy, who has acted in many movies with Power Star Puneeth Rajkumar, recalls some incidents. In an exclusive interview with Vijay Karnataka Online, the Kannada actor Srinivasa Murthy says, though Puneeth Rajkumar was jovial and naughty outside the set, became very serious and disciplined on the set. Everyone used to call him Appu, so the name became his identity. Srinivasa Murthy has acted in many movies with Puneeth Rajkumar including Appu, his second innings as hero.

#PuneethRajkumar #Appu #SrinivasaMurthyExclusiveInterview

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке