ಅಪ್ಪಾ ಸ್ವೀಕರಿಸು || appa sweekarisu jesus kannada song || New Jesus Kannada Song

Описание к видео ಅಪ್ಪಾ ಸ್ವೀಕರಿಸು || appa sweekarisu jesus kannada song || New Jesus Kannada Song

#jesus #jesus #jesuskannadasong #jesusstatus
ಪಶ್ಚಾತಾಪದಿ ಮರಳಿ ಬಂದಿರುವೆ...
ಅಪ್ಪಾ ಸ್ವೀಕರಿಸು..
ನೊಂದು ಬೆಂದು ಸೋತು ಬಂದಿರುವೆ...
ಅಪ್ಪಾ ಸ್ವೀಕರಿಸು...
ದೊಂದು ಗಾರನ ಮಗನು ನಾನಾದೆ...‍‍
ಆಳಾಗಿ ಸ್ವೀಕರಿಸು..
ಅಪ್ಪಾ ಸ್ವೀಕರಿಸು...2

ಅಪ್ಪಾ ನಿನ್ನಿಂದ ದೂರವಾಗಿ ದುಷ್ಟನಾದೆ ನಾ... ಕೆಟ್ಟು ಹೋದೆನಾ..
ದುಷ್ಟ ಚಟಕೆ ದಾಸನಾಗಿ.. ನಾಶವಾದೆ ನಾ.. ಪಾಪಿಯಾದೆ ನಾ..
ಕಾಮಮೋಹ ಮದದಿಂದ ಅಂದನಾದೆ ನಾ.. ಕೆಟ್ಟ ಮೇಲೆ ಬುದ್ಧಿ ಬಂತು.. ತಿರುಗಿ ಬಂದೆ ನಾ.. 3

ಅಪ್ಪಾ ನಾ ನಂಬಿದವರೆ ಶತ್ರುವಾದರು... ಬೆನ್ನಲ್ಲೇ ಏರಿದರು..
ಅಪ್ಪಾ ನನ್ನ ಪಾಪವೀಂದು ರೋಗವಾಗಿದೆ.. ಅನಾಥನಾದೆನು..
ಹಸಿದು ಹಸಿದು ನೊಂದು ಬೆಂದು ಓಡಿ ಬಂದೆನು..2
ಕೈಯ ತುತ್ತ ನೀಡಿ ಎನಗೆ ಹಸಿವನ್ನು ನೀಗಿಸು..
ಅಪ್ಪಾ ಹಸಿವ ನೀಗಿಸು... ಕೈ ತುತ್ತ ನೀಡಪ್ಪಾ..
ನನ್ನ ಮುದ್ದು ಕಂದ ಬೇಗ ಬಾ.. ನಿನಗಾಗಿ ಕಾದಿದ್ದೆ..
ಏನೇ ಆದರೂ ನನ್ನ ಕಂದ ನೀ... ಚಿನ್ನಾ ರನ್ನಾ ನೀ...
ಕೆಂಪಾದ ನಿನ್ನ ಪಾಪವಾ.. ಕ್ಷಮಿಸಿ ಬಿಟ್ಟಿರುವೆ.. ಪ್ರೀತಿ ತುಂಬಿರುವೆ.. ನನ್ನ ಪ್ರೀತಿ ತುಂಬಿರುವೆ..

ಸತ್ತಾ ಮಗನು ಮರಳಿ ಬಂದ.. ಹಬ್ಬಾ ಮಾಡಿರಿ..
ಔತಣ ನೀಡಿರಿ.. ಕಾಲಿಗೆ ಚಪ್ಪಲಿ.. ಕೈಗೆ ಉಂಗುರ.. ತೊಡಿಸಿ ಹರಸಿರಿ..
ಹೊಸ ವಸ್ತ್ರ ವುಡಿಸಿರಿ..
ಪಶ್ಚಾತಾಪ ಪಡಲು ಇಂದು ಸ್ವರ್ಗ ನಲಿದಿದೆ..2
ಮರಳಿ ಬಂದ ಪುತ್ರನಿಗೆ ಸ್ವರ್ಗ ತೆರೆದಿದೆ..
ಸ್ವರ್ಗ ತೆರೆದಿದೆ.. ಬಾರೋ ಸ್ವರ್ಗ ತೆರೆದಿದೆ..
ಕಂದಾ ಸ್ವರ್ಗ ತೆರೆದಿದೆ.. ನೋಡು ಸ್ವರ್ಗ ತೆರೆದಿದೆ..
ಬಾರೋ ಸ್ವರ್ಗ ತೆರೆದಿದೆ.. ಕಂದಾ ಸ್ವರ್ಗ ತೆರೆದಿದೆ..

Комментарии

Информация по комментариям в разработке