ಹುಳಿ ಅನ್ನ ಅಥವಾ ಬುತ್ತಿ ಅನ್ನ

Описание к видео ಹುಳಿ ಅನ್ನ ಅಥವಾ ಬುತ್ತಿ ಅನ್ನ

ಇದೇನು ಹುಳಿ ಅನ್ನ ಅಥವಾ ಬುತ್ತಿ ಅನ್ನ... ನೋಡಿ ಕಲಿಯಿರಿ

ಬೇಕಾಗುವ ಸಾಮಗ್ರಿಗಳು
ಅಕ್ಕಿ 1 ಕಪ್, ಬ್ಯಾಡಿಗೆ ಮೆಣಸಿನಕಾಯಿ 6, ಕೆಂಪು ಮೆಣಸಿನಕಾಯಿ 6, ಜೀರಿಗೆ 1 ಚಮಚ, ಬೆಳ್ಳುಳ್ಳಿ 20 ಎಸಳು, ಎಣ್ಣೆ 7-8 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು ಒಂದು ನಿಂಬೆ ಹಣ್ಣಿನ ಗಾತ್ರ, ಹರಿಶಿನ ಕಾಲು ಚಮಚ, ಬೆಲ್ಲ 1 ಚಮಚ, ಕರಿಬೇವು ಸ್ವಲ್ಪ.

ಮಾಡುವ ವಿಧಾನ
ಮೊದಲು ಅಕ್ಕಿಯಿಂದ ಹಾಕಿ ಅನ್ನ ಮಾಡಿಕೊಳ್ಳಬೇಕು. ಒಂದು ಬಾಣಲಿಗೆ 2 ಚಮಚ ಎಣ್ಣೆ ಹಾಕಿ, ಅದಕ್ಕೆ ಮೆಣಸಿನಕಾಯಿ ಜೀರಿಗೆ ಬೆಳ್ಳುಳ್ಳಿ ಕರಿಬೇವು ಸೇರಿಸಿ ಹುರಿದುಕೊಳ್ಳಿ, ನಂತರ ಹುರಿದಿಟ್ಟುಕೊಂಡ ಸಾಮಗ್ರಿಗಳ ಜೊತೆ ಹುಣಸೆಹಣ್ಣು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲಿಯನ್ನು ಬಿಸಿಗಿಟ್ಟು ಅದಕ್ಕೆ ಉಳಿದ ಎಣ್ಣೆಯನ್ನು ಹಾಕಿ ಸಾಸಿವೆ ಕರಿಬೇವಿನ ಒಗ್ಗರಣೆ ಮಾಡಿಕೊಂಡು, ಜಜ್ಜಿದ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ, ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಹರಿಶಿಣ, ಬೆಲ್ಲ ಸೇರಿಸಿ ಎಣ್ಣೆ ಬಿಡುವವರೆಗೂ ಚೆನ್ನಾಗಿ ಕುದಿಸಿ ಕೊಳ್ಳಿ. ಈ ಮಿಶ್ರಣವನ್ನು ಮಾಡಿಟ್ಟುಕೊಂಡ ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಮುದ್ದೆಯ ರೀತಿ ಉಂಡೆ ಕಟ್ಟಿಕೊಳ್ಳಬಹುದು ಅಥವಾ ಹಾಗೆಯೇ ಬಡಿಸಬಹುದು. ಈಗ ರುಚಿಯಾದ ಹಳ್ಳಿ ಶೈಲಿಯ ಬುತ್ತಿ ಅನ್ನ ಅಥವಾ ಹುಳಿಯನ್ನ ಸವಿಯಲು ಸಿದ್ಧ.

#Recipe #Food

Комментарии

Информация по комментариям в разработке