EP4 | ವಿದ್ಯಾರ್ಥಿ ಆರಾಮವಾಗಿದ್ದರೆ ಅವನು ಸತ್ತಂತೆ! | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

Описание к видео EP4 | ವಿದ್ಯಾರ್ಥಿ ಆರಾಮವಾಗಿದ್ದರೆ ಅವನು ಸತ್ತಂತೆ! | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

ಮನುಷ್ಯಜೀವನದ ಸಾರ್ಥಕತೆ ಇರುವುದು ಅವನು ಆಶ್ಚರ್ಯವತ್ ವ್ಯಕ್ತಿಯಾಗಿ ಬೆಳೆಯುವುದರಲ್ಲಿ. ಈ ನಿಟ್ಟಿನಲ್ಲಿ ಜೀವನದ ಅಗಾಧ ಸಾಧ್ಯತೆಗಳ ಮಹತ್ವವನ್ನು ಪೂಜ್ಯ ಸ್ವಾಮಿ ನಿರ್ಭಯಾನಂದಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದಾರೆ. ಉಪನಿಷತ್ತಿನ ವಾಕ್ಯಗಳನ್ನು ಉದ್ಧರಿಸಿ, ವಿಶೇಷವಾಗಿ ವ್ಯಾಖ್ಯಾನ ಮಾಡುತ್ತಾ ಅಲ್ಲಿನ ಶಕ್ತಿಸಂದೇಶದ ತಿರುಳನ್ನು ಯುವಜನರಿಗೆ ಉಣಬಡಿಸುತ್ತಿದ್ದಾರೆ ಸ್ವಾಮೀಜಿ. ಎತ್ತರದ ಗುರಿ ಇಟ್ಟುಕೊಂಡು ಅದನ್ನು ಮುಟ್ಟುವಾಗ ನಮ್ಮ ಸ್ವಮಿತಿಯ ಕಲ್ಪನೆಯೇ ನಮ್ಮನ್ನು ಕುಬ್ಜಗೊಳಿಸುತ್ತದೆ ಎಂಬ ಗುಟ್ಟನ್ನು ಈ ವಿಡಿಯೋದಲ್ಲಿ ಅವರು ರಟ್ಟು ಮಾಡುತ್ತಿದ್ದಾರೆ.

ಇದು 'ವಿವೇಕ ಹಂಸ' ವ್ಯಕ್ತಿತ್ವ ನಿರ್ಮಾಣಕಾರಿ ಮಾಸಪತ್ರಿಕೆ ಆಯೋಜಿಸಿದ್ದ 'ಹಣತೆ' ಕಾರ್ಯಕ್ರಮದ ಅಂಗವಾಗಿ 'ಸುಪ್ತಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ' ಎಂಬ ವಿಷಯದ ಮೇಲೆ ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ ಅವರು ನೀಡಿದ ಉಪನ್ಯಾಸದ ಆಯ್ದ ಭಾಗ ಈ ವಿಡಿಯೋ.
.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews

Комментарии

Информация по комментариям в разработке