Sri Rama Jaya Rama Jaya Jaya Rama Geetha Ramayana - Smt Kavana Rajkumar, Smt Divya Giridhar

Описание к видео Sri Rama Jaya Rama Jaya Jaya Rama Geetha Ramayana - Smt Kavana Rajkumar, Smt Divya Giridhar

Song : Sri Rama Jaya Rama Jaya Jaya Rama Geetha Ramayana
Composed & Sung by- Smt Divya Giridhar , Smt Kavana
Music - Sri Vinay Ranghol Swaroop Studio Mysore ‪@NarendraModi‬ #narendramodi #ayodhya #ayodhyarammandir #rammandir #bhajan

ರಾಗ|| ದೇಶ್||

ಶ್ರೀರಾಮ ಜಯರಾಮ ಜಯ ಜಯ ರಾಮ
ಶ್ರೀರಾಮ ಜಯರಾಮ ಜಯ ಜಯ ರಾಮ

1. ಸನಕಾದಿಗಳನ್ನು ತಡೆಯಲು ರಾಮ
ಜಯ ವಿಜಯರಿಗೆ ಶಾಪವು ರಾಮ
ಶಾಪ ವಿಮೋಚನೆ ಬೇಡಲು ರಾಮ
ರಾಕ್ಷಸ ಜನ್ಮವ ತಳೆದರು ರಾಮ


2. ಸುರಮುನಿ ತಪವನು ಮಾಡಲು ರಾಮ
ಅಸುರರು ತಡೆಯುತಲಿದ್ದರು ರಾಮ
ಅಮರರು ಮುನಿಗಳ ಬೇಡಲು ರಾಮ
ವಿಷ್ಣುವೆ ರಾಮನು ಎನಿಸಿದ ರಾಮ

3. ಶೇಷನೇ ಲಕ್ಷ್ಮಣ ನಾಗಲು ರಾಮ
ಶಂಖವೆ ಭರತನು ಆದನು ರಾಮ
ಚಕ್ರನೇ ಆ ಶತ್ರುಘನು ರಾಮ
ಲಕ್ಷ್ಮಿಯು ಸೀತೆಯು ಆದಳು ರಾಮ

4. ಕೋಸಲದರಸನು ದಶರಥ ರಾಮ
ಸುತರಿಗೆ ತಪಿಸುತಲಿದ್ದನು ರಾಮ
ವಸಿಷ್ಠರಲ್ಲಿಗೆ ಬಂದರು ರಾಮ
ಸುತ ಕಾಮೇಷ್ಟಿಯ ಬೆಸಸಿದ ರಾಮ

5. ಕೃಪೆಯಿಡೆ ಋಷ್ಯಶೃಂಗರು ರಾಮ
ದಶರಥ ಯಾಗವ ಮಾಡಿದ ರಾಮ
ಅಗ್ನಿಯು ಪಾಯಸವೀಯಲು ರಾಮ
ನೃಪದನು ಸತಿಯರಿಗಿತ್ತನು ರಾಮ


6. ತಾಳುತೆ ಗರ್ಭವ ಕಾಲದಿ ರಾಮ
ಕೌಸಲೆ ನಿನ್ನನು ಪಡೆದಳು ರಾಮ
ಕೈಕೆಯಿಗೆ ಭರತನು ಜನಿಸಲು ರಾಮ
ಸುಮಿತ್ರೆಗವಳೀ ಮಕ್ಕಳು ರಾಮ

7. ಅವರೇ ಲಕ್ಷ್ಮಣ ಶತ್ರುಘ್ನ ರಾಮ
ಪುತ್ರರು ಸುಖದಲಿ ಬೆಳೆಯಲು ರಾಮ
ವಿಶ್ವಾಮಿತ್ರರು ಕರೆದರು ರಾಮ
ದಶರಥನೊಲ್ಲದೆ ಚಿಂತಿಸೆ ರಾಮ

ರಾಗ ಭಿಂಪಾಲಸ್

8. ಗುರುಗಳು ಸಲಹೆಯ ಕಳುಹಿಸೆ ರಾಮ
ತಾಟಕಿಯನು ಸಂಹರಿಸಿದೆ ರಾಮ
ಶಿಲೆಯೊಳು ಪೆಣ್ಣನು ಗೈದೆಯ ರಾಮ
ಕ್ಷತ್ರಿಯ ವಿದ್ಯೆಯ ಕಲಿಯುತ ರಾಮ

9. ಯಾಗಕ್ಕೆ ಭೂಮಿಯ ಉಳುಹಲು ರಾಮ
ನೇಗಿಲ ಕೊನೆಯಲ್ಲಿ ಬಾಲೆಯು ರಾಮ
ಸೀತೆಯು ಎನಿಸುತ ಬೆಳೆದಳು ರಾಮ
ಮದುವೆಯ ಸುದ್ದಿಯು ಬಂದುದೆ ರಾಮ


10. ಶಿವಕೋದಂಡವ ಮುರಿಯುತೆ ರಾಮ
ಸೀತೆಯ ಮಾಲೆಯ ಧರಿಸಿದ ರಾಮ
ಕುವರರ ಲಗ್ನಗಳಾದವು ರಾಮ
ಮಾಂಡವಿ ಭರತನ ಪತ್ನಿಯು ರಾಮ

11. ಊರ್ಮಿಳೆ ವಲ್ಲಭ ಲಕ್ಷ್ಮಣ ರಾಮ
ಶೃತ ಕೀರ್ತಿಗೆ ಶತ್ರುಘ್ನನು ರಾಮ
ಸಕಲರು ಅಯೋಧ್ಯೆಯಲಿರುತಿರೆ ರಾಮ
ಭಾರ್ಗವ ಗರ್ವವ ಮುರಿದೆಯ ರಾಮ


12. ಸಕಲರು ಸುಖದಲ್ಲಿ ಸೇರಲು ರಾಮ
ಸದ್ಗುಣ ರಾಮಗೆ ಪಟ್ಟವು ರಾಮ
ಸಕಲವು ಸಿದ್ಧತೆ ಮಾಡಲು ರಾಮ
ಮಂಥರೆ ಕೈಕೆಯಿಗೆ ಬೋಧಿಸೆ ರಾಮ

13. ವರಗಳನಾಕೆಯು ಕೇಳಲು ರಾಮ
ಭರತನು ನಾಡಿಗೆ ಈಶನು ರಾಮ
ಕೇಳ್ಪುದೆ ನೃಪನಿಗೆ ಮೂರ್ಚೆಯು ರಾಮ
ತಂದೆಯ ನುಡಿಯನು ನಡೆಸಲು ರಾಮ

ರಾಗ ವಾಸಂತಿ

14. ಸಂತೈಸುತ ನೀ ಹೊರಟೆಯ ರಾಮ
ಪತಿವ್ರತೆ ಸೀತೆಯು ಸೇರ್ದಳು ರಾಮ
ಅಣ್ಣನ ಸಂಗಡ ಲಕ್ಷ್ಮಣ ರಾಮ
ಗಂಗಾ ತೀರವ ದಾಟಲು ರಾಮ

15. ಗುಹನಿಗೆ ಪ್ರೇಮವ ತೋರಿದ ರಾಮ
ಭರದ್ವಾಜರು ಸತ್ಕರಿಸಲು ರಾಮ
ಚಿತ್ರಕೂಟಾದ್ರಿಯ ಸೇರಲು ರಾಮ
ಅಗಲಿಕೆ ಕಳೆದನು ದಶರಥ ರಾಮ


16. ತಾತಗೆ ಕರ್ಮವ ನಡೆಸಿದ ರಾಮ
ಭರತನು ಪಡೆದನು ಪಾದುಕೆ ರಾಮ
ವನದಲಿ ಮುನಿಗಳನೊಲಿಸಿದ ರಾಮ
ಪಂಚವಟಿಯ ನೀ ಸೇರಿದೆ ರಾಮ

17. ಶೂರ್ಪನಕಿ ಮುಖಭಂಗವು ರಾಮ
ಖರದೂಷಣ ಸಂಹಾರವು ರಾಮ
ಮಾಯಾಮೃಗವನು ಮೋಹಿಸೆ ರಾಮ
ಮಾರೀಚಾಸುರ ಮಡಿದನು ರಾಮ


18. ರಾವಣ ಸೀತೆಯ ಕದ್ದನು ರಾಮ
ತಡೆದ ಜಟಾಯುಗೆ ಸದ್ಗತಿ ರಾಮ
ಕಬಂಧ ಶಬರಿಗೆ ಮುಕ್ತಿಯು ರಾಮ
ಸುಗ್ರೀವ ಸಖ್ಯವು ಆಗಲು ರಾಮ

19. ವಾಲಿಯ ಮರ್ಧನವಾಯಿತು ರಾಮ
ಹನುಮನ ಸೇವೆಯನೊಪ್ಪಲು ರಾಮ
ಕೂಡಲೆ ಲಂಕೆಯ ಸೇರಲು ರಾಮ
ಸೀತಾ ವಾರ್ತೆಯ ತಂದುದೆ ರಾಮ

20. ಶರಧಿಗೆ ಸೇತುವೆ ಕಟ್ಟಿಸಿ ರಾಮ
ರಾವಣ ರಕ್ಕಸ ನಾಶವು ರಾಮ
ಘಟಕರ್ಣಾದಿಗಳಳಿದರು ರಾಮ
ಭಕ್ತ ವಿಭೀಷಣಗೆ ರಾಜ್ಯವು ರಾಮ

ರಾಗ ಯಮನ್

21. ಸೀತೆಯ ನೋಡಲು ಮೋದವು ರಾಮ
ಸಕಲರು ರಾಜ್ಯವಾ ಸೇರಲು ರಾಮ
ರಾಜ್ಯವ ನೀ ಸ್ವೀಕರಿಸಿದೆ ರಾಮ
ಅಮರರು ಹೂಮಳೆಗರೆದರು ರಾಮ

22. ಧರೆಯೊಳು ಧರ್ಮವು ಸತ್ಯವು ರಾಮ
ಕಾಲಕ್ಕೆ ಮಳೆ ಬೆಳೆ ನಡೆಸಿದೆ ರಾಮ
ಮಹಾಸಾಮ್ರಾಟನು ಎನಿಸಿದ ರಾಮ
ದೇವರು ಎನ್ನುತ ಭಜಿಪರು ರಾಮ


23. ಪ್ರಜೆಯಲಿ ನೀನಿಡೆ ಪ್ರೇಮವು ರಾಮ
ಲೋಕವೆ ಭಕ್ತಿಯ ತೋರಲು ರಾಮ
ಸೀತೆಯು ಗರ್ಭವ ತಾಳಲು ರಾಮ
ಅಗಸನ ನುಡಿಯ ಕಳುಹಿತು ರಾಮ

24. ಮುನಿ ವಾಲ್ಮೀಕಿಯು ಒಯ್ಯಲು ರಾಮ
ಕುಶ ಲವರುದಿಸಿದರಲ್ಲಿಯೆ ರಾಮ
ಯಾಗದಿ ಕುದುರೆಯ ಕಳುಹಲು ರಾಮ
ವೇಗದಿ ಪುತ್ರರು ತಡೆಯುತೆ ರಾಮ

25. ನರಸಾರ್ಯ ಕೃತ ನಾಮವೇ ರಾಮ
ಭರದಲ್ಲಿ ಧರೆಯೊಳು ಹರಡಿತು ರಾಮ
ರಘುಕುಲ ರತ್ನವು ಎನಿಸಿದೆ ರಾಮ
ಜಯ ಜಯವಾಗಲಿ ಜಾನಕಿ ರಾಮ


ಆನಂದಾಮೃತ ವರ್ಷಕ ರಾಮ
ಆಶ್ರಿತ ವತ್ಸಲ ಜಯ ಜಯ ರಾಮ
ಸಕಲ ಜೀವ ಸಂರಕ್ಷಕ ರಾಮ
ಆಶ್ರಿತ ವತ್ಸಲ ಜಯ ಜಯ ರಾಮ

ಸಮಸ್ತ ಲೋಕೋದ್ಧಾರಕ ರಾಮ
ರಾಮ ರಾಮ ಜಯ ರಾಜಾರಾಮ
ರಾಮ ರಾಮ ಜಯ ಸೀತಾರಾಮ
ಸೀತಾರಾಮ ಸೀತಾರಾಮ ಸೀತಾರಾಮ

Комментарии

Информация по комментариям в разработке