Tayi Ninna Madilali... ತಾಯಿ ನಿನ್ನ ಮಡಿಲಲಿ..

Описание к видео Tayi Ninna Madilali... ತಾಯಿ ನಿನ್ನ ಮಡಿಲಲಿ..

ಸಾಹಿತ್ಯ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ ಗರ್ತಿಕೆರೆ ರಾಘಣ್ಣ
ಮೂಲ ಗಾಯಕರು ಪುತ್ತೂರು ನರಸಿಂಹ ನಾಯಕ್
ಹಾಡಿದವರು ಶ್ರೀ ರಶ್ಮಿ ಶಾನುಭೋಗ
ಹಾರ್ಮೋನಿಯಂ ಶ್ರೀರಕ್ಷಾ ಶಾನುಭೋಗ

ತಾಯೆ ನಿನ್ನ ಮಡಿಲಲಿ ಕಣ್ಣ ತೆರೆದ ಕ್ಷಣದಲಿ.
ಸೂತ್ರವೊಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ || ಪ ||

ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು
ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನಾ ಗೆದ್ದುದು
ಗುಣಕೆ ಮಣಿದು ನಾನು ನಿನ್ನ ಚರಣ ತಲಕೆ ಬಿದ್ದುದು || ೧ ||

ಇಲ್ಲಿ ಹರಿವ ಪುಣ್ಯ ಜಲ ಕಣ್ಣ ತೊಳೆವ ಹಸಿರ ಕುಲ
ಮಣ್ಣಿನಿಂದ ಹೋರಾಟ ಗಂಧ ನನ್ನ ಬದುಕ ತೆರೆದವು
ಮೈಯ ಎಲ್ಲ ಕಣ ಕಣದಲು ನಿನ್ನ ಋಣವ ಬರೆದವೂ || ೨ ||

ಇತಿಹಾಸಕು ಹಳೆಯ ನಿನ್ನ ಪರಂಪರೆಗೆ ಹೂಡಿ ನನ್ನಾ
ಸೊನ್ನೆಯಾದ ಮಗುವಿಗೊಂದು ಸಣ್ಣ ಪಾಲು ನೀಡಿದೆ
ನಿನ್ನ ಹಿರಿಯ ಕಂದರಿರುವ ಎಡೆಗೆ ತಂದು ನಿಲಿಸಿದೆ || ೩ ||

- ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು

Комментарии

Информация по комментариям в разработке