Manasi Sudhir - Live Program Jhalak - Muliya Jewels - ಅಕ್ಕ ಬರೆದ ಹಾಡು ಹಾಡಿದ ಖುಷಿ

Описание к видео Manasi Sudhir - Live Program Jhalak - Muliya Jewels - ಅಕ್ಕ ಬರೆದ ಹಾಡು ಹಾಡಿದ ಖುಷಿ

ನಮ್ಮ ಕನ್ನಡ ನಾಡಿನ ಹೆಮ್ಮೆಯ ಆಭರಣ ಸಂಸ್ಥೆಯಾದ "ಮುಳಿಯ ಜ್ಯುವೆಲ್ಸ್" ಈ ಬಾರಿಯ ಕನ್ನಡ ರಾಜ್ಯೋತ್ಸವದ ಅಂಗವಾಗಿ "ಕನ್ನಡ - ಬದುಕು -ಬಂಗಾರ" ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
"ಬೆಳೆಸೋಣ ನಮ್ಮತನ" ಎಂಬ ಧ್ಯೇಯವಿರುವ ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಮುಳಿಯ ಜ್ಯುವೆಲ್ಸ್ ನ ಎಲ್ಲಾ ವರಿಷ್ಠರಿಗೂ ಮತ್ತು ಇದಕ್ಕೆ ಕಾರಣರಾದ @naikstudios ನ ಸಂದೀಪ್ ಅವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಪುತ್ತೂರು ಮತ್ತು ಮಡಿಕೇರಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆಂದೇ ಒಂದೇ ದಿನದಲ್ಲಿ ಸುಂದರ ಸಾಹಿತ್ಯ ಬರೆದು ಕೊಟ್ಟ ನನ್ನ ಪ್ರೀತಿಯ ಅಕ್ಕ ಅಲಕಾ ಜಿತೇಂದ್ರ, ಕೆಲವೇ ಗಂಟೆಗಳಲ್ಲಿ ರಾಗ ಸಂಯೋಜನೆ ಮಾಡಿದ ಶ್ರೀ ಗುರುರಾಜ ಮಾರ್ಪಳ್ಳಿ ಮತ್ತು ಇದನ್ನು ಹಾಡಲು ಸರಿಯಾದ ಹಿನ್ನೆಲೆ track ಮಾಡಿ ಕೊಟ್ಟ ನನ್ನ ಗೆಳೆಯ ನಿಹಾರ್ ದಾಬಡೆ , ಎಲ್ರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನಾನು ಚೆಂದ ಕಾಣುವಂತೆ ನನ್ನ ವಸ್ತ್ರ, ಪ್ರಸಾಧನ ನೋಡಿಕೊಂಡ ನನ್ನ ಪ್ರೀತಿಯ ಶಿಷ್ಯೆ ವಸುಂಧರಾಳಿಗೂ ತುಂಬು ಧನ್ಯವಾದಗಳು.

Комментарии

Информация по комментариям в разработке