ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ | ಗರತಿಯ ಹಾಡುಗಳು

Описание к видео ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ | ಗರತಿಯ ಹಾಡುಗಳು

#ShobhaSagaOfficial #ShobhaSagar
ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ
ಗರತಿಯ ಹಾಡುಗಳು
#janapada #uttarakarnataka #ಜಾನಪದ_ಹಾಡುಗಳು_ಡಿಜೆ #ಜಾನಪದ_ಹಾಡುಗಳು
#jaanapada #folkmusic #kannadafolk
#janapada #jaanapada #folksongs #Kannadapoems

Song Credit 👇
Title - ಬಾಗಿಲ ಮುಂದ ರಂಗೋಲಿ
Lyrics - Janapada
Singer - Shobha Sagar

Song Lyrics 👇

ಬಾಗಿಲ ಮುಂದ ರಂಗೋಲಿ
ಬಾಗಿ ಹಾಕುತ ನಾನಾ ತರದಲ್ಲಿ
ನೆನಪು ಹೊರಳ್ಯಾವ ಮತ್ತ ಹಿಂದ ಹಿಂದ
ಮರಳಿ ಬಂದಾಳ ಅವ್ವ ಕಣ್ ಮುಂದ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಅಂಗಳದ ಮುಂದಣ ತುಳಸಿ
ಸೊರಗಿ ಹೋಗ್ಯಳ ನನ್ನಿಲ್ಲಿಗೆ ಕರಿಸಿ
ಬಾಗಿ ಹೋಗ್ಯಾವ ಅಪ್ಪನ ಹೊಂಬಾಳೆ
ಯಾರಿಗೆ ಹೇಳಲಿ ನಾನಾ ತರದಲ್ಲಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹೊಸಲಾಗಿನ ಕುಂಕುಮ ಅರಿಶಿಣ
ಬಾಡಿ ಬಾಗ್ಯಾವ ಬಾಗಿಲ ತೋರಣ
ಅಣ್ಣ ತಮ್ಮನ ಕಂಡು ತಿಂಗಳಾಗಿ
ತಿರುಗಿ ಬಂದೆ ಮತ್ತ ನನ ತವರಿಗಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

ಹೊಳಿದಂಡಿ ಮ್ಯಾಲಿರುವ ಕರಕಿ
ನೆತ್ತಿ ಮೇಲಿರುವ ಶಿವನ ಮುದಿಗಿರಿಸಿ
ತಾಯಿ ನೇನೇಪಾಗು ಕನೀರ ಹರಿಸಿ
ಹೊರಟೆ ಹಾಲುಂಡ ತವರಿಗೆ ಹರಸಿ

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ

Комментарии

Информация по комментариям в разработке