ನಂದಿನಿ ಕಟಿಯಲ್ಲಿ ಕುಳಿತಿಹ ಚೆಲುವೆ I NANDINI KATIYALLI KULITIHA CHELUVE I Bhajana By Shekar Thumbe

Описание к видео ನಂದಿನಿ ಕಟಿಯಲ್ಲಿ ಕುಳಿತಿಹ ಚೆಲುವೆ I NANDINI KATIYALLI KULITIHA CHELUVE I Bhajana By Shekar Thumbe

ನಂದಿನಿ ಕಟಿಯಲ್ಲಿ ಕುಳಿತಿಹ ಚೆಲುವೆ
ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ I ಪ I

ಸುಂದರಿ ಬ್ರಾಮರಿ ನಯನ ಮನೋಹರಿ I 2 I
ಚಂದಿರ ಮುಡಿಯ ಬೃಂಗ ಕುಂತಳೆ I 2 I
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಪಾದರಿ ತಾವರೆ ಸುರಗೆ ಕೇದಗೆ I 2 I
ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ II ನಂದಿನಿ II

ಶಂಖಚಕ್ರಧರೆ ಪಂಕಜಲೋಚನೆ I 2 I
ಅಂದುಗೆ ಝಣರವ ಸುನಾದ ವಂದಿನಿ I 2 I
ಮರುಗ ಮಲ್ಲಿಗೆ ಜಾಜಿ ಸೇವಂತಿಗೆ
ಸುರಗಿ ಪಾದರಿ ತಾವರೆ ಸಂಪಿಗೆ I 2 I
ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ II ನಂದಿನಿ II

ಪಟ್ಟೆ ಪೀತಂಬಾರಿ ಉಟ್ಟ ಸುಕುಮಾರಿ I 2 I
ದಿಟ್ಟ ಕಂಗಳ ಬೆಳಕ ಲಾವಣ್ಯ ಮಂಜರಿ I 2 I
ಜಾಜಿ ಜವನ ಮಲ್ಲಿಗೆ ಸಂಪಿಗೆ
ತಾಳೆ ಪಾದರಿ ಮಾಗಳಿ ನೈದಿಲೆ I 2 I
ಮುಡಿಯೆ ಹೂ ಮಾಲೆ ತಾಯೆ ಮುಡಿಯೆ ಹೂ ಮಾಲೆ II ನಂದಿನಿ II


‪@likhithrajpolali3582‬
‪@githeshkotian‬
‪@sumanraajpolali8831‬
‪@Avinashdevadiga121‬
‪@harshithshetty94‬
‪@harishmanikantapura9663‬
‪@jpkavoorcreations‬
‪@shreebhadrakalicreation8611‬


Special Thanks :- ‪@Suddi9‬

Комментарии

Информация по комментариям в разработке