ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG

Описание к видео ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG

ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG

"Thank you for watching. Please subscribe to our channel and support us".


ಹೆಚ್ಚಿನ ಭಕ್ತಿಗೀತೆಗಳಿಗಾಗಿ ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
   / saimypbeats  

ನಮ್ಮ ಚಾನಲ್‌ಗೆ ಚಂದಾದಾರರಾಗಲು ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://www.youtube.com/c/SaiMYPBeats...


ದಯಾಮಯ ಗುರು ಕರುಣಾ ಮಯ
ಕರುಣಾ ಮಯ ಗುರು ಪ್ರೇಮಾಮಯ || ಪ ||

ಪರಮ ಸ್ವರೂಪನು ತಾನಂತೆ
ಅರಿಯಲು ಭಕ್ತಿಯು ಬೇಕಂತೆ
ಒಲಿದರೆ ಪಾವನನವನಂತೆ
ಸಂಸಾರದ ಭಯ ಅವಗಿಲ್ಲಂತೆ || ೧ ||

ಗುರುವಿಗೆ ಸಮನಾರಿಲ್ಲಂತೆ
ಗುರು ಪಾದವ ನಂಬಿರಬೇಕಂತೆ
ಧೃಢತೆಯು ತನಗಿರಬೇಕಂತೆ
ಧೃತಿ ಗೆಡದೆ ತಾನಿರಬೇಕಂತೆ || ೨ ||

ಪಾಪಿಗೆ ತಾ ಬಹು ದೂರಂತೆ
ದುರ್ಮಾರ್ಗಿಗೆ ಕಾಣನು ಗುರುವಂತೆ
ಕುಟಿಲರಿಗೆ ಒಲಿಯನು ತಾನಂತೆ
ಕುಹಕಿಗೆ ಎಂದೂ ಸಿಗನಂತೆ || ೩ ||

ಜ್ಞಾನವೇ ತನ್ನುಸಿರು ಆಗಿಹುದು
ಉಸಿರಲು ಪಾವನವಾಗುವುದು
ಸೇವೆಯೆ ಸಾಧನೆಯಾಗಿಹುದು
ಗುರು ಕರುಣೆಯೆ ಧನ್ಯನ ಮಾಡುವುದು || ೪ ||

ಶರಣಾಗತರನು ಕಾಯುವನು
ಪರಾಮನಂದವ ನುಡಿಸುವನು
ನಿಜಭಕ್ತಿಗೆ ಗುರು ತಲೆಬಾಗುವನು
ಭವ ಜಲದಿಯ ದಾಂಟಿಸಿ ಕಾಯುವನು || ೫ ||

ನಾನೀಯೆಂಬುದ ನಳಿಯೆಂದ
ಮದ ಮತ್ಸರಗಳ ನೀ ಸುಡು ಎಂದ
ದುರುಳರಿಗೆ ನಾ ದೂರೆಂದ
ದುರಹಂಕಾರಿಗೆ ತಾ ಸಿಗನೆಂದ || ೬ ||

ಸದ್ಗುರು ದೊರೆವುದು ದುರ್ಲಭವು
ದೊರೆತರೆ ಜನ್ಮವು ಪಾವನವು
ಸಾರುತಲರಿವವು ಶಾಸ್ತ್ರಗಳು
ಗುರುಪರಮೇಶ್ವನು ಅಹುದೆಂದು || ೭ ||

ಅಚ್ಯುತ ಅನಂತ ಶ್ರೀಗುರುವೇ
ಚಿನ್ಮಯ ಚಿತ್ರಣ ನೀ ಗುರುವೇ
ಗುರು ಕನ್ಯೇಶ್ವರ ಬಾ ಗುರುವೇ
ಕರ ಜೋಡಿಸಿ ನಾ ಶಿರ ಬಾಗಿರುವೆ || ೮ ||

ದಯಾಮಯ ಗುರು ಕರುಣಾ ಮಯ
ಕರುಣಾ ಮಯ ಗುರು ಪ್ರೇಮಾಮಯ
ಕರುಣಾ ಮಯ ಗುರು ಪ್ರೇಮಾಮಯ






#GuruDattaru, #SaiMYPBeats, #Prartane, #KannadaLyricalVideo, #KannadaDevotionalSongs, #Dayamaya, #Daya_Maya_Kannada_Song
#DattatreyaGurugalu, #ದಯಾಮಯ_ಗುರು_ಕರುಣಾಮಯ
#ಭಜನೆಗಳು, #Bhajans,
#DattaGuru, #devotionalsongs, #Populardevotionalsongs, #kannadadevotional,
#sridattatreya,



Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.


Social Media Links :
My Instagram Profile Link :   / sai_myp_beats  
My Facebook Profile Link : https://www.facebook.com/profile.php?...
Follow me on Twitter :   / madhusudhanrm2  

Комментарии

Информация по комментариям в разработке