ಕಾಯಕದಿಂದ ಬದುಕು ಮಾಡಣ್ಣ

Описание к видео ಕಾಯಕದಿಂದ ಬದುಕು ಮಾಡಣ್ಣ

ಗಾಯನ :~ ಶ್ರೀ ಶರಣಕುಮಾರ ಯಾಳಗಿ
ತಬಲಾ :~ ಶ್ರೀ ಯಮನೇಶ ಯಾಳಗಿ
ಸಾಹಿತ್ಯ :~ ಶ್ರೀ ಶಿವರುದ್ರಯ್ಯ ಗವಾಯಿಗಳು ಗೌಡಗಾಂವ
ಸಹಕಾರ :~ ಶಶಿಧರ ಎಸ್ ಯಾಳಗಿ


#ತತ್ವಪದ #ಕಾಯಕದಿಂದ ಬದುಕು ಮಾಡಣ್ಣ#trending #foryou #youtube #peace #kannada



ಕಾಯಕದಿಂದ ಬದುಕು ಮಾಡಣ್ಣಈ ಕಾಯವ ದಂಡಿಸಿ ಬಾಳುವುದೇ ಬಾಳುವೆ ನೋಡುತ್ತಾ
¶ಪ¶
ಸೋಮಾರಿಯಾದರೆ ಬದುಕು
ಸರಿಯಲ್ಲ ಎಂದಿಗೂ ಅದಕು
ಹಾಳು ಹರಟೆ ಯಾತಕೆ ಬೇಕು
ಹಗಲಿರುಳು ನೀ ದುಡಿಬೇಕು
ಕಾಯಕವೇ ಕೈಲಾಸ ನಿತ್ಯ ನುಡಿ ಅಣ್ಣನ ಮಾತು
ಕೈತುಂಬಾ ಕೆಲಸವಿದ್ದಾಗ ಬರುವುದು ನಿನ್ನಯ ಬಾಳಿಗೆ ಬೆಳಕು
¶೧¶
ಇನ್ನೋಬ್ಬರು ಗಳಿಸಿದ ಅನ್ನ
ಕುಳಿತು ತಿನ್ನ ಬಾರದು ಅಣ್ಣಾ
ಚಲದಿಂದ ದುಡಿಮೆ ಮಾಡಿ
ಬಲವಂತ ನಿನಾಗಣ್ಣ
ಬಡತನ ನಿರ್ಮೊಹನೆ ಗಾಗಿ ಬಡಿದಾಡುದೆ ಲೇಸಣ್ಣ
ದುಡಿತವೆ ದುಡ್ಡಿನ ತಾಯಿ ಅನ್ನೋ ಗಾದೆ
ಸುಳ್ಳಲ್ಲ ಜಾಣ
¶೨¶
ಶ್ರಮದಿಂದ ಸದೃಡನಾಗಿ ಎನಿಸಿಕೊಳ್ಳೊ
ನೇಗಿಲ ಯೋಗಿ
ಎಂದು ನಿನ್ನ ಬೆವರನು ಸುರಿಸಿ
ತುಂಬು ನಿನು ಕಾಳಿನ ರಾಶಿ
ಮಾಡಿ ಉಣ್ಣು ಬೇಕಾದಷ್ಟು
ಬೇಡಿ ಉಣ್ಣುನೀಡಿದಷ್ಟು
ಕಡಕೊಳದ ಮಡಿವಾಳಪ್ಪ
ಹೇಳಿದ ಮಾತು ಸುಳ್ಳಲ್ಲ ಎಪ್ಪಾ
¶೩¶
ದಂಡಿಸು ನಿ ನಿನ್ನ ದೇಹ
ಹೊಂದಿಸಿ ಹೇಳುವೆ ಗೆಳೆಯ
ದುಡಿಮೆ ಇಲ್ಲದ ಆ ಸಂಪತ್ತು
ನಿನಗೊಂದಿನ ಅದು ಆಪತ್ತು
ಬಾಪೂಜಿ ಹೇಳಿದ ಮಾತು
ಪೂಜ್ಯರು ಮರುಕಳಿಸಿದರು ಕುಂತು
ಶಿವರುದ್ರನ ನುಡಿ ನೇಮಕ್ಕೆ
ಬರಿ ತಲೆ ಹಾಕಿದರೇನು ಬಂತು
@@@@@@@

Комментарии

Информация по комментариям в разработке