Manasi Sudhir and Sudhir Rao -Harapanahalli Bheemavva - Baagilu Tegeye- Shiva Parvathi Conversation

Описание к видео Manasi Sudhir and Sudhir Rao -Harapanahalli Bheemavva - Baagilu Tegeye- Shiva Parvathi Conversation

ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು . Do remember to like, share and subscribe.


ದಾಸಸಾಹಿತ್ಯದಲ್ಲಿ ಪ್ರಮುಖ ಕೊಡುಗೆಯನ್ನಿತ್ತ ಅಪರೂಪದ ಮಹಿಳೆಯೆನಿಸಿದ "ಭೀಮೇಶಕೃಷ್ಣ" ಕಾವ್ಯನಾಮದ ಹರಪನಹಳ್ಳಿ ಭೀಮವ್ವ(1823-1903)
ಅವರ "ಬಾಗಿಲು ತೆಗೆಯೇ" . ಈ ಕವನದ ಬಗ್ಗೆ ಖ್ಯಾತ ಲೇಖಕಿ ಎಂ ಆರ್ ಕಮಲಾ ಅವರು ಹೀಗೆ ಬರೆಯುತ್ತಾರೆ
" ಶಿವ ಮತ್ತು ಪಾರ್ವತಿಯರ ನಡುವೆ ನಡೆವ ತಿಳಿಹಾಸ್ಯದ ಸಂಭಾಷಣೆಯಂತಿರುವ ಈ ಸೊಗಸಾದ ಕೀರ್ತನೆ ಮಾತಿಗಿಂತ ಮೌನದ ಅನುಸಂಧಾನ ಅರ್ಥಪೂರ್ಣವೆಂಬುದನ್ನು ಧ್ವನಿಪೂರ್ಣವಾಗಿ ಬಿಂಬಿಸುತ್ತದೆ.
ಶಿವನ ಎಲ್ಲ ಬಡಾಯಿ, ಬಡಿವಾರಗಳನ್ನು ಬಡಿದು ಬಿಸಾಕಿ ವಿವೇಕ ಕಲಿಸುವ ಹೆಣ್ಣಾಗಿ ಇಲ್ಲಿ ಪಾರ್ವತಿ ಕಾಣುತ್ತಾಳೆ. ಪಶುಪತಿ, ಸರ್ಪಶರೀರಿ, ನೀಲಕಂಠ, ಭೂತನಾಥ, ಸದ್ಯೋಜಾತ, ಖ್ಯಾತ, ಪ್ರಖ್ಯಾತ ಮುಂತಾದ ಯಾವ ಗುಣವಿಶೇಷಣಗಳಿಗೂ ಬಗ್ಗದ ಹೆಣ್ಣು ಪಾರ್ವತಿ. ಈ ಕೀರ್ತನೆ ಇಂದಿಗೂ ಎಷ್ಟು ಪ್ರಸ್ತುತ. ಲೋಕವೆಲ್ಲ ಬಿರುದು ಬಾವಲಿಗಳ ಅಬ್ಬರ, ಆಡಂಬರ, ಆರ್ಭಟಗಳಲ್ಲಿ ಮುಳುಗಿರುವಾಗ ನಗುನಗುತ್ತಲೇ ಅವನ್ನು ತಿರಸ್ಕರಿಸಿ ಒಳಗಿನ ವಿವೇಕವನ್ನು ಬಡಿದೆಬ್ಬಿಸುವ ಪಾರ್ವತಿಯಂಥ ಪ್ರಜ್ಞಾವಂತೆ ಈವತ್ತಿನ ತುರ್ತು ಎಂದೇ ಭಾವಿಸುತ್ತೇನೆ. ಗಂಡನೇ ಆದರೂ, ಜೊತೆಯಲ್ಲಿಯೇ ಬದುಕಿದ್ದರೂ ಅಂತರಂಗದ ಬಾಗಿಲು ತೆರೆಯಬೇಕಾದರೆ ಮೊದಲು ಹುಸಿ ಪ್ರಭಾವಳಿಗಳ ಕಿತ್ತೆಸೆದ ಸಹಜ ಮನುಷ್ಯನಾಗಿರಬೇಕು. ಭಾವನೆಗಳಿಗೆ ಸ್ಪಂದಿಸುವಂತಿರಬೇಕು. ಅಕ್ಷರದ, ಮಾತಿನ ಅಟಾಟೋಪದಲ್ಲಿ ತಮ್ಮನ್ನು ತಾವು ಶ್ರೇಷ್ಠರು ಎಂದು ಭ್ರಮಿಸಿ ಬೀಗುತ್ತಿರುವವರ ನಡುವೆ ಇಂದು `ಮೌನದ ವಿವೇಕ'ವನ್ನು ಕಲಿಸುವವರಾರು?"


ನನ್ನ ಪ್ರತಿ ಹಾಡಿಗೂ ವಿಡಿಯೋ ಮಾಡುತ್ತಿದ್ದ ನನ್ನ ಗಂಡ ಸುಧೀರ್ ಕ್ಯಾಮರಾದ ಮುಂದೆ ಬಂದಿದ್ದಾರೆ. ಉಡುಪಿಯ ಹೆಮ್ಮೆಯಾದ ಪ್ರತಿಭಾನ್ವಿತ ವಿಡಿಯೋಗ್ರಾಫರ್ ಪ್ರಸನ್ನ ಕೊಡವೂರು ತುಂಬಾ ಪ್ರೀತಿಯಿಂದ ಚಿತ್ರೀಕರಣ ಮತ್ತು ಸಂಕಲನ ಮಾಡಿಕೊಟ್ಟಿದ್ದಾರೆ. ಮೈಸೂರಿನ ಪ್ರತಿಷ್ಠಿತ "ನಾವು" ಬ್ಯಾಂಡ್ ನ ಅನುಷ್ ಮತ್ತು ಮುನ್ನ ಬಹಳ ಮುತುವರ್ಜಿ ವಹಿಸಿ ಈ ಹಾಡಿಗೆ ರಾಗ ಸಂಯೋಜಿಸಿ, ರೆಕಾರ್ಡ್ ಮಾಡಿ, ಬೇಕಾದ ಹಿನ್ನೆಲೆ ಸಂಗೀತವನ್ನು ಒದಗಿಸಿ ನಮಗೆ ಉಡುಗೊರೆಯಾಗಿ ನೀಡಿದ್ದಾರೆ. ತನ್ನ ಅದ್ಭುತ antique house ನ್ನು ಚಿತ್ರೀಕರಣಕ್ಕೆ ನೀಡಿದ ಮಾಯಾಗುಂಡಿ ಕೃಷ್ಣಮೂರ್ತಿ ‌ಭಟ್ ಇವರೆಲ್ಲರಿಗೂ ನಾನು ಚಿರಋಣಿ. ನಾನು ಕೇಳಿದಾಗಲೆಲ್ಲಾ ಸೂಕ್ತ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವ ಡಾ. ಶ್ರೀಪಾದ್ ಭಟ್ ಸರ್ ಗೂ, ಈ ಹಾಡನ್ನು ಸೂಚಿಸಿದ ಎಂ ಆರ್ ಕಮಲಾ ಮೇಡಂ ಗೂ, ಪ್ರೀತಿಯಿಂದ ನನಗೂ , ಸುಧೀರ್ ಸರ್ ಗೂ matching outfit ನೀಡಿದ ನಮ್ಮ ನೃತ್ಯ ಸಂಸ್ಥೆಯ ಶಿಷ್ಯೆಯರಿಗೂ ನಾನು ಆಭಾರಿ.

Комментарии

Информация по комментариям в разработке