ನವರಾತ್ರಿ ಉತ್ಸವ - ಶ್ರೀಕ್ಷೇತ್ರ ಕಟೀಲು | ಸಂಪ್ರದಾಯ - ಆಚರಣೆ - ವೈಶಿಷ್ಠ್ಯಗಳ ಅವಲೋಕನ | ಸಂಕೀರ್ತನೆ - ೧

Описание к видео ನವರಾತ್ರಿ ಉತ್ಸವ - ಶ್ರೀಕ್ಷೇತ್ರ ಕಟೀಲು | ಸಂಪ್ರದಾಯ - ಆಚರಣೆ - ವೈಶಿಷ್ಠ್ಯಗಳ ಅವಲೋಕನ | ಸಂಕೀರ್ತನೆ - ೧

ಕಟೀಲಿನಲ್ಲಿ ಸಂಕೀರ್ತನೆ ಎನ್ನುವಂತಹ ಒಂದು ಪದ್ಧತಿ ಬಹಳಷ್ಟು ಹಿಂದಿನಿಂದಲೂ ಆಚರಣೆಯಲ್ಲಿದೆ. ಸಂಕೀರ್ತನೆ ಎಂದರೆ ರಂಗ ಪೂಜೆಯ ಮೊದಲು ಮತ್ತು ಕೊನೆಯ, ಹಾಗೂ ಅದರ ಮಧ್ಯಭಾಗದಲ್ಲಿ ದೇವರ ಹಾಡುಗಳನ್ನು ಹಾಡಿಕೊಂಡು, ಅದರೊಂದಿಗೆ ಕುಣಿಯುವಂತಹ ಒಂದು ಕ್ರಮ. ವಾದಿರಾಜರಿಂದ ವಿರಚಿಸಲ್ಪಟ್ಟ ತುಳಸೀ ಸಂಕೀರ್ತನೆಯ ಹಾಡುಗಳನ್ನು ಹಾಡಿಕೊಂಡು, ಕಟೀಲಿನ ಬ್ರಾಹ್ಮಣ ಪ್ರಮುಖರು ಸಮವಸ್ತ್ರದಲ್ಲಿ ಬಂದು ನವರಾತ್ರಿಯ ಆರಂಭದಿಂದ ಕೊನೆಯ ದಿನದವರೆಗೆ, ಬೇರೆ ಬೇರೆ ಕುಣಿತದಲ್ಲಿ, ಅದರಂತೆಯೇ ಬೇರೆ ಬೇರೆ ಪದ್ಯಗಳನ್ನು ಹಾಡಿಕೊಂಡು ನವರಾತ್ರಿಯನ್ನು ವೈಭವದಿಂದ ಆಚರಿಸುತ್ತಾರೆ. ಇದೂ ಒಂದು ಕಟೀಲಿನ ವೈಶಿಷ್ಟ್ಯವಾಗಿದೆ.
#tulunadu #kateel #kateeltemple #kateelamma #navaratri #dasara #durgaparameshwari #love #sankeerthana #mangalore #festival

Комментарии

Информация по комментариям в разработке