ಬಾರೆ ಸಖಿ ಪೋಗುವ ರಾಸ I Bare Sakhi Poguva Raasa I Bhajana By Likhith Raj Polali

Описание к видео ಬಾರೆ ಸಖಿ ಪೋಗುವ ರಾಸ I Bare Sakhi Poguva Raasa I Bhajana By Likhith Raj Polali

ನಿನ್ನುಂಗುಟವು ಬೊಮ್ಮಾoಡವನೊಡೆಯಿತು
ನಿನ್ನ ನಡೆ ಈ ಜಗವ ಈರಡಿ ಮಾಡಿತು
ನಿನ್ನ ಪೊಕ್ಕಲು ಸರಸಿಜನಾಭನ ಪಡೆಯಿತು
ನಿನ್ನ ವಕ್ಷಸ್ಥಳ ಸಿರಿ ಲಕುಮಿಗೆಡೆಯಾಯಿತು
ನಿನ್ನ ನಲಿದೊಳು ಸಿರಿ ಲಕುಮಿಯ ಬಿಗಿದಪ್ಪಿತು
ನಿನ್ನ ಕುಡಿ ನೋಟ ಸಕಲ ಜೀವರ ಪೊರೆಯಿತು
ನಿನ್ನ ತೊದಲು ನುಡಿ ಸಕಲ ವೇದವ ಸವಿಯಿತು
ನಿನ್ನ ಅವಯವಂಗಳ ಮಹಿಮೆಯನು ಒಂದೊಂದು ಪೊಗಳಲಲವಲ್ಲ ಸಿರಿ ಪುರಂದರ ವಿಠ್ಠಲರೇಯ
ನಿನ್ನ ಅಪಾರ ಮಹಿಮೆಗೆ ನಮೋ. ನಮೋ......ಎಂಬೆ ನಮೋ....

ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ |
ಕೊಳಲನೂದುವಾ ಕೃಷ್ಣ ಕೊಳಲನೂದುವ ||

ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರು
ಮಾಡಿದ್ದಾಯಿತು | ಮೂರು ನಿಮಿಷ ಅವನ ಮರೆಯಲಾಗದಾಯಿತು |
ಬೀರುತಿರುವ ಮೋಹಜಾಲ ಸಡಲದಾಯಿತು ||
||ಬಾರೆ ಸಖಿ||

ಯಾವನೀತನೆಂದು ಚಿಂತೆ ಮಾಡಿದ್ದಾಯಿತು ಗೋವಳನಿವನಲ್ಲವೆಂದು ನಿರ್ಧರಾಯಿತು |
ಯಾವನಾದರೇನು ಇವನ ಕ್ಷಣವು ಕಾಣದೆ | ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||
||ಬಾರೆ ಸಖಿ||

ಸಕಲ ಲೋಕನಾಥನೀತನೆಂದು ತಿಳಿಯಿತು. ಸಕಲವನರ್ಪಿಸುವುದೊಂದೆ
ಮಾರ್ಗ ಉಳಿಯಿತು | ಲಕುಮಿ ಮುರುಳಿ ರೂಪದಲ್ಲಿ
ಇಹುದು ಹೊಳೆಯಿತು | ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು ||
‌ ||ಬಾರೆ ಸಖಿ||

‪@likhithrajpolali3582‬
‪@jpkavoorcreations‬
‪@sumanraajpolali8831‬
‪@harishmanikantapura9663‬
‪@Avinashdevadiga121‬
‪@shreebhadrakalicreation8611‬

Комментарии

Информация по комментариям в разработке