ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

Описание к видео ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

ಹಣದ ವಿಷಯದಲ್ಲಿ ಈ ದಾರಿಯನ್ನು ಅನುಸರಿಸಿದರೆ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ

ಅಗ್ನಿ, ವಾಯು, ವರುಣ, ಪೃಥ್ವಿ ಮತ್ತು ಜಲ ಸೇರಿ ಮನುಷ್ಯನಾಗುತ್ತಾನೆ. ಯಾವುದೇ ಜೀವಕ್ಕಾದರೂ ಪಂಚಭೂತಗಳು ಅನಿವಾರ್ಯ. ಈ ಐದು ಪ್ರಾಣ ಇಲ್ಲದಿದ್ದರೆ ಮನುಷ್ಯ ನಿರ್ಜೀವಿಯಾಗಿರುತ್ತಾನೆ. ನಾವೆಲ್ಲರೂ ಅಹಂಕಾರದಿಂದ ರಾಕ್ಷಕರಾಗಿದ್ದೇವೆ. ನಿರಹಂಕಾರದಿಂದ ನಮ್ಮಲ್ಲಿನ ರಾಕ್ಷಸತನವನ್ನು ಹೋಗಲಾಡಿಸಬೇಕಿದೆ. ಹಾಗಾಗಿ ಪ್ರತಿಯೊಬ್ಬರಲ್ಲೂ ತಗ್ಗಿ ಬಗ್ಗಿ ನಡೆಯುವ ಬುದ್ಧಿ ಇರಬೇಕು. ನಮ್ಮಲ್ಲಿ ಅಭಿಮಾನ, ಅಹಂಕಾರಕ್ಕೆ ಜಾಗ ಕೊಡದೇ ಪ್ರತಿಯೊಬ್ಬರನ್ನೂ ಸೇವೆ ಮಾಡುವುದನ್ನು ಬೆಳೆಸಬೇಕು. ಸೇವೆ ಮತ್ತು ತಪಸ್ಸಿಗೆ ನಾವು ಒಗ್ಗೂಡಿದರೆ ಅದರಿಂದಲೂ ನಮಗೆ ಮತ್ತು ಮತ್ತು ಗಮ್ಮತ್ತು ಸಿಗುತ್ತದೆ. ಆ ಗಮ್ಮತ್ತಿಗೆ ಅಂತ್ಯ ಇರುವುದಿಲ್ಲ. ಆಧ್ಯಾತ್ಮ ಯಾವತ್ತೂ ಶುಷ್ಕ ಆಗಬಾರದು. ಹಾಗೆಯೇ ಎಲ್ಲಿ ಹಣದ ವ್ಯಾಮೋಹ ಇಲ್ಲವೋ ಅಲ್ಲಿ ಸೇವೆ ಶುರುವಾಗುತ್ತದೆ. ಪ್ರಪಂಚದಲ್ಲಿ ಭೋಗದ ಸಮಯ ಮತ್ತು ಯೋಗದ ಸಮಯ ಅಂತ ಇದೆ. ಹಾಗಾಗಿ ನಮ್ಮ ಬದುಕಿನಲ್ಲಿ ಸಿದ್ದಾಂತ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಲಭ್ಯ, ಇಲ್ಲದಿದ್ದಲ್ಲಿ ನಮ್ಮ ಬದುಕು ಬರೀ ನಾಟಕವಾಗಿರುತ್ತದೆ. ನಾವು ಯಾವುದೇ ಮಹಾತ್ಮರಿಗೆ ಬೆಲೆ ಕೊಡುತ್ತೇವೆಯಾದರೂ ಅದು ಅವರ ಸಿದ್ದಾಂತವೇ ಆಗಿರುತ್ತದೆ. ಹಾಗೆಯೇ ನಮ್ಮ ಬದುಕು ಭಾಷಣಗಳಿಗಿಂತ ಕೃತಿಯಾಗಬೇಕಿದೆ. ಪ್ರಪಂಚದಲ್ಲಿ ಇರುವುದು ಸತ್ಯ ಮತ್ತು ಪ್ರೀತಿಯ ಭಾಷೆಯಷ್ಟೇ. ಇವೆರಡೂ ಗೊತ್ತಿರುವವನಿಗೆ ನೀತಿ ತಾನಾಗಿಯೇ ಲಭ್ಯವಾಗುತ್ತದೆ.

ನಿಜವಾದ ಪೂಜೆ ಯಾವುದು ಎನ್ನುವ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಇದು ಅನುಭವ ಮಂಟಪ. ಇಲ್ಲಿ ಪ್ರತೀ ಗುರುವಾರ ಭಗವಾನರ ಆರಾಧನೆಯ ನಂತರ ಭಕ್ತರಲ್ಲಿ ಆದ ಬದಲಾವಣೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ಕಾರಣ ಪ್ರಾಯೋಗಿಕ ಜ್ಞಾನವನ್ನು ಪಡೆಯುವುದಾಗಿದೆ. ಸ್ವಚ್ಛ ಆಹಾರ, ಸ್ವಚ್ಛ ವಾತಾವರಣದಿಂದ ಮನಸ್ಸು ಸ್ವಚ್ಛವಾಗುತ್ತದೆ. ಮನೆ ತುಂಬಾ ಕೊಳೆಯಿದ್ದರೆ ಮನಸ್ಸಿನಿಂದ ಧ್ಯಾನ ಮಾಡಲು ಸಾಧ್ಯವಿಲ್ಲ. ಅಂತರ್ ಶೌಚ, ಬಹಿರ್ ಶೌಚ ಮತ್ತು ಮನೋಶೌಚ ಶುಚಿಯಾಗದೆ ಮನಸ್ಸು ಶುಚಿಯಾಗುವುದಿಲ್ಲ. ಆಲೋಚನೆ, ವೈಖರಿ, ನಡವಳಿಕೆ, ಆಹಾರ ಮತ್ತು ಸಹವಾಸ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಕೆಟ್ಟ ವ್ಯಕ್ತಿಯ ಸಹವಾಸದಿಂದ ಒಳ್ಳೆಯ ವ್ಯಕ್ತಿ ಕೆಟ್ಟ ಗುಣಗಳಿಂದ ಪ್ರಭಾವಿತನಾಗುತ್ತಾನೆ. ಹಾಗೆಯೇ ಒಳ್ಳೆಯ ವ್ಯಕ್ತಿಗಳೊಂದಿಗಿನ ಸಹವಾಸ ಸದ್ಗುಣಗಳನ್ನು ಬೋಧಿಸುತ್ತದೆ. ಪ್ರಪಂಚವು ಯೋಗ ಮತ್ತು ಭೋಗ ಪ್ರಪಂಚವೆಂದು ವಿಭಜಿಸಲ್ಪಟ್ಟಿದೆ. ಭಾರತ ಯೋಗಿಗಳ ಭೂಮಿ. ಸೂರ್ಯನಲ್ಲಿ ಏಳು ಕಿರಣಗಳಿವೆ, ಅದರಲ್ಲಿ ಮೂರು ಆಧ್ಯಾತ್ಮ ಕಿರಣಗಳಾಗಿವೆ. ಈ ಆಧ್ಯಾತ್ಮ ಕಿರಣ ಭಾರತದ ಮೇಲೆ ಮಾತ್ರ ಬೀಳುತ್ತದೆ. ಇದೇ ಕಾರಣಕ್ಕೆ ಎಲ್ಲಾ ಯೋಗಿಗಳು ಭಾರತದಲ್ಲಿ ಅವತಾರವೆತ್ತಿದ್ದಾರೆ. ಸರ್ವ ಮಂತ್ರಗಳ ಮೂಲ ಓಂಕಾರ. ನಮ್ಮ ಉಸಿರಾಟ ಪ್ರಕ್ರಿಯೆಯೂ ಇದನ್ನು ಸಾಕ್ಷ್ಯಪಡಿಸುತ್ತದೆ. ವಿಜ್ಞಾನಿಗಳು ಸೌರಮಂಡಲದ ಶಬ್ದವನ್ನು ಅನ್ವೇಷಿಸಿದಾಗ ಇದೇ ಓಂಕಾರ ಕೇಳಿಬಂದಿದೆ. ಸೃಷ್ಟಿಯ ಸರ್ವ ವಸ್ತುಗಳಲ್ಲೂ ಇದನ್ನು ಗಮನಿಸಬಹುದು. ನಿತ್ಯಾನಂದನೆಂದರೆ ನಿತ್ಯವೂ ಆನಂದವಾಗಿರುವುದು ಎಂದರ್ಥ. ನಿತ್ಯಾನಂದ ಭಗವಾನರಿಗೆ ಹುಟ್ಟಿಲ್ಲ. ಅವರು ದತ್ತಾತ್ರೇಯರ ಕೊನೆಯ ಅವತಾರವಾಗಿದ್ದಾರೆ. ನಿತ್ಯಾನಂದ ಭಗವಾನರನ್ನು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ದತ್ತಾತ್ರೇಯರು ತ್ರಿಮೂರ್ತಿಗಳ ಅಂಶ. ಅವರ ಮುಂದೆ ಪರಶುರಾಮನೇ ಪರಾಭವನಾಗಿದ್ದಾನೆ. ನಾಲ್ಕು ವೇದಗಳನ್ನು ಅರಿತ ಮಹಾಶಕ್ತಿ ದತ್ತಾವತಾರ. ಗುರುವನ್ನು ಅಳೆಯಲು ಸಾಧ್ಯವೇ ಇಲ್ಲ. ಪ್ರಾಣದೇವ ಹನುಮಂತ ಪರಮಜ್ಞಾನಿಯಾಗಿದ್ದಾನೆ. ವಾಯುವಿನ ಅನುಭೂತಿ ಶ್ವಾಸಕೋಶದವರೆಗಷ್ಟೇ ಅನುಭವಕ್ಕೆ ಸಿಗುತ್ತದೆ. ಅದಕ್ಕಿಂತ ಕೆಳಗೆ ಅದರ ಅನುಭಾವ ದೊರಕುವುದಿಲ್ಲ. ನಮ್ಮ ಶ್ವಾಸಕೋಶದ ಮಧ್ಯೆ ಭಗವಂತನು ಬೆಳಕಿನ ರೂಪದಲ್ಲಿ ನೆಲೆಯಾಗಿದ್ದಾನೆ. ಅನುಭವಕ್ಕೆ ಬಾರದ ಸಂಗತಿಯು ಪರಮಾತ್ಮನಾಗಿದ್ದಾನೆ. ಸತ್ಕರ್ಮಗಳು ಅಂತಹಾ ಅನುಭವವನ್ನು ನೀಡುತ್ತದೆ. ಭಗವಂತನ ಪೂಜೆ ಮಾಡುವ ಮುನ್ನ ಅವನ ಅಪೇಕ್ಷೆಯನ್ನು ಅರಿಯಬೇಕು. ಎಂತಹಾ ದೊಡ್ಡ ವ್ಯಕ್ತಿಯೇ ಆದರೂ ಭಗವಂತನಲ್ಲಿ ಒಂದಲ್ಲಾ ಒಂದನ್ನು ಬೇಡಿಕೊಂಡಿರುತ್ತಾನೆ. ಜಗತ್ತಿನಲ್ಲಿ ಏನು ಬೇಕಾದರೂ ಕೊಡುವ ಶಕ್ತಿಯಿರುವುದು ಮಹಾದೇವ ಮತ್ತು ತಿರುಪತಿ ವೆಂಕಟೇಶ್ವರನಿಗೇ ಆಗಿದೆ. ಭಗವಂತನ ಮುಂದೆ ಎಲ್ಲರೂ ಭಿಕ್ಷಕರಿಗೆ ಸಮಾನ. ಹೀಗಾಗಿ ಭಿಕ್ಷಕರನ್ನು ಕೀಳಾಗಿ ಕಾಣುವ ಅವಶ್ಯಕತೆಯಿಲ್ಲ. ಇತರರಿಗೆ ಒಂದು ಹೊತ್ತಿನ ಅನ್ನ ನೀಡದಷ್ಟು ಬಡತನ ಯಾರಿಗೂ ಬಂದಿಲ್ಲ. ಕಲಾವಿದರ ಬಳಿ ಸರಸ್ವತಿಯ ಸಾನಿಧ್ಯವಿದೆ. ಹಿರಿಯ ಕಲಾವಿದರು ಅನೇಕ ಕಷ್ಟಗಳನ್ನು ಅನುಭವಿಸಿ ಜನರನ್ನು ರಂಜಿಸಿದ್ದಾರೆ. ಹೀಗೆಯೇ ಅನೇಕರು ವಿವಿಧ ಸ್ತರದಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಹೆತ್ತ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಅವರು ತೀರಿದ ನಂತರ ಗೋಕರ್ಣದಲ್ಲಿ ತರ್ಪಣ ಬಿಡುವುದು ವ್ಯರ್ಥ.

ರಾಜಕೀಯ ರಂಗದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಇಂದಿಗೂ ಭಾರತೀಯ ಸಂಸ್ಕೃತಿಯ ಪಾಲನೆಯನ್ನು ಮಾಡಿಕೊಂಡು ಬಂದಿದ್ದಾರೆ. ಇಲ್ಲಿ ಒಬ್ಬ ವ್ಯಕ್ತಿ ಎಷ್ಟು ದೊಡ್ಡ ಪದವಿ ಸಂಪಾದಿಸಿದ ಎನ್ನುವುದಕ್ಕಿಂತ ಆದರ್ಶದಾಯಕವಾಗಿ ಹೇಗೆ ಬದುಕಿದ ಎನ್ನುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ದಿನಂಪ್ರತಿ ಒಂದು ರೂಪಾಯಿಯನ್ನು ರೈತರು, ಯೋಧರು, ಬಡ ವಿದ್ಯಾರ್ಥಿಗಳಿಗೆ ಮೀಸಲಿಟ್ಟರೆ ಭಾರತ ಬಡ ದೇಶವಾಗಿ ಉಳಿಯುವುದಿಲ್ಲ. ರೈತರ ಆತ್ಮಹತ್ಯೆಗಳು ಸಂಭವಿಸುವುದಿಲ್ಲ. ಆಶ್ರಮವು ಇಂತಹಾ ಅನೇಕ ಕಾರ್ಯಗಳನ್ನು ಮಾಡಿದೆ. ತೂಕವಿರದ ಮಾತನ್ನಾಡುವುದು ನಿಷ್ಫಲ ಎನ್ನುವ ಸಿದ್ಧಾಂತವಿದೆ. ಪ್ರತಿಯೊಬ್ಬರಲ್ಲೂ ದೇವರ ಚೈತನ್ಯವಿದೆ. ಪ್ರತಿಯೊಬ್ಬರನ್ನೂ ನಮಸ್ಕರಿಸಲು ಇದುವೇ ಕಾರಣ. ಜಗತ್ತು ಪ್ರತಿಯೊಬ್ಬರಿಗೂ ಗುರುವಿನ ಸ್ಥಾನದಲ್ಲಿದೆ. ಕೃಷ್ಣ ಸುಧಾಮರ ಸ್ನೇಹ ಸಂಬಂಧವು ಜಗತ್ತಿಗೆ ಮಾದರಿ. ಭಗವಂತನಿಗೆ ಆ ಸ್ಥಾನ ಬಂದಿರುವುದು ಸ್ನೇಹ ಸತ್ಯ ಎನ್ನುವ ಸಿದ್ಧಾಂತದಿಂದ. ಕಲಾವಿದರನ್ನು ಗೌರವಿಸಬೇಕು. ಆಧ್ಯಾತ್ಮ ಪ್ರತಿಯೊಂದು ರಂಗದಲ್ಲೂ ನೆಲೆಸಿದೆ. ಪುನೀತ್ ರಾಜ್ಕುಮಾರ್ ಅವರ ರಾಜಕುಮಾರ ಚಿತ್ರ ನೋಡಿದವರು ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸುವುದಿಲ್ಲ. ಒಂದು ಚಲನಚಿತ್ರಕ್ಕೆ ನಮ್ಮ ಜೀವನವನ್ನು ಬದಲಿಸುವ ಶಕ್ತಿಯಿದೆ. ಪ್ರತಿಯೊಂದು ಕೆಲಸವೂ ಶ್ರೇಷ್ಠ. ಪ್ರತಿಯೊಂದು ರಂಗವನ್ನೂ ಗೌರವಿಸಬೇಕು. ಮಹಾತ್ಮಾ ಗಾಂಧೀಜಿಯ ಮಹೋದ್ದೇಶದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ವೇದಿಕೆಯ ಮುಂದೆ ತರುವ ಕೆಲಸವನ್ನು ಆಶ್ರಮ ಮಾಡಿಕೊಂಡು ಬಂದಿದೆ. ಭಕ್ತಿಯಿಂದ ಪ್ರಾರ್ಥಿಸಿದ ಮೂರ್ತಿಯಲ್ಲಿ ಭಗವಂತ ಖಂಡಿತವಾಗಿ ನೆಲೆಸಿರುತ್ತಾನೆ. ನಿರುದ್ಯೋಗ ತಡೆ, ಬಡತನ ನಿರ್ಮೂಲನೆ ಮುಂತಾದ ಮಹತ್ಕಾರ್ಯಗಳಿಗೆ ಪಕ್ಷ, ಜಾತಿ ಬೇಧಗಳನ್ನು ಮರೆತು ಒಂದಾಗುವ ಅನಿವಾರ್ಯತೆ ಪ್ರಸ್ತುತ ಸಮಾಜದಲ್ಲಿದೆ. ಹೃದಯದ ಭಾಷೆಯಲ್ಲಿ ಮಾತನಾಡಬೇಕು. ಏಕೆಂದರೆ ಹೃದಯಕ್ಕೆ ಮೋಸ ಗೊತ್ತಿಲ್ಲ. ಬುದ್ಧಿಗೆ ಲಾಭ ನಷ್ಟಗಳ ಬಗ್ಗೆ ಗೊತ್ತು.

For More Videos:

ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ್ ಗುರೂಜಿ    • ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ...  

ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರಿ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರ...  

ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ | ಅವಧೂತ ಶ್ರೀ ವಿನಯ್ ಗುರೂಜಿ
   • ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮ...  

ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ ಆಚರಿಸಿದ ಭಕ್ತಸಾಗರ ! | ಅವಧೂತ ಶ್ರೀ ವಿನಯ್ ಗುರೂಜಿ    • ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ...  

Комментарии

Информация по комментариям в разработке